12.7 C
Munich
Home News ಹೊಳೆನರಸೀಪುರ: ಶನಿವಾರ ಹನುಮೋತ್ಸವ ಹಿನ್ನೆಲೆ ಹೊಳೆಯುತ್ತಿದೆ ಹೊಳೆನರಸೀಪುರ

ಹೊಳೆನರಸೀಪುರ: ಶನಿವಾರ ಹನುಮೋತ್ಸವ ಹಿನ್ನೆಲೆ ಹೊಳೆಯುತ್ತಿದೆ ಹೊಳೆನರಸೀಪುರ

ಹೊಳೆನರಸೀಪುರ: ತಾಲ್ಲೂಕಿನ ಸಮಸ್ತ ಹಿಂದೂ ಬಾAಧವರಿAದ ಮತ್ತು ಶ್ರೀ ಹನುಮೋತ್ಸವ ಆಚರಣಾ ಸೇವಾ ಸಮಿತಿ  ವತಿಯಿಂದ ಡಿ.13 ರಂದು ಆಯೋಜಿಸಲಾಗಿರುವ ದ್ವೀತಿಯ ವರ್ಷದ ಬೃಹತ್ ಸಾರ್ವಜನಿಕ ಶ್ರೀ ಹನುಮೋತ್ಸವ ಹಮ್ಮಿಕೊಳ್ಳಲಾಗಿದೆ.

ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದ್ದು, ಪಟ್ಟಣದ ಪ್ರಮುಖ ವೃತ್ತಗಳು ಮತ್ತು ರಸ್ತೆಗಳು ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಎಲ್ಲೆಡೆ ಕೇಸರಿ ಬಂಟಿಗ್ಸ್ ಹಾಕಿ ಹನುಮನ ಭಾವ ಚಿತ್ರವಿರುವ ಫ್ಲೆಕ್ಸ್ಗಳು ತುಂಬಿಹೋಗಿ, ಪಟ್ಟಣವು ನವ ವಧು ವಿನಂತೆ ಸಿಂಗಾರಗೊಂಡಿದೆ.

ಡಿ.13ರ ಶನಿವಾರ ದ್ವಿತೀಯ ವರ್ಷದ ಶ್ರೀ ಹನುಮೋತ್ಸವಕ್ಕೆ ಪಟ್ಟಣದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಳಿಗ್ಗೆ 8 ಗಂಟೆಯ  ಶುಭಲಗ್ನದಲ್ಲಿ ಶ್ರೀ ಹನುಮ ಮೂರ್ತಿಗೆ  ವಿಶೇಷ ಪೂಜಾ ಕೈಂಕರ್ಯ ಕೈಗೊಂ ನಂತರ , ಶ್ರೀ ಯವರ ಉತ್ಸವ ನಡೆಯಲಿದೆ.

ಹನುಮೋತ್ಸವದಲ್ಲಿ ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ಹನುಮಾಭಿಮಾನಿಗಳು  ಸೇರಿದಂತೆ ಸುಮಾರು 10 ರಿಂದ 15 ಸಾವಿರ ಜನ  ಸೇರುವ ನಿರೀಕ್ಷೆ ಇದೆ. ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಾಡಿನ ಪ್ರಖ್ಯಾತ ಸಾಂಸ್ಕೃತಿಕ ಮತ್ತು ಜಾನಪದ ಕಲಾ ತಂಡಗಳ ಪ್ರತಿಭಾ ಪ್ರದರ್ಶನ ಮತ್ತು ಮೆರವಣಿಗೆ
ಸಾಗಲಿದೆ. ಮಧ್ಯಾಹ್ನ 1 ಗಂಟೆಗೆ ತಾಲ್ಲೂಕು ಕಚೇರಿಯ ಮುಂಭಾಗ ಇರುವ ಸಾರ್ವಜನಿಕ ಸಮುದಾಯ ಭವನ (ಗಣಪತಿ ಪೆಂಡಾಲಿನಲ್ಲಿ) ಬೃಹತ್ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು (ಪ್ರಸಾದ ವಿತರಣೆ) ಏರ್ಪಡಿಸಲಾಗಿದ್ದು.

ನಂತರ ಪ್ರಖ್ಯಾತ ಕಿರುತೆರೆ ಮತ್ತು ಚಲನಚಿತ್ರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸ್ವಯA ಪ್ರೇರಣೆಯಿಂದ ಎಲ್ಲಾ ಸಮಸ್ತ ಹಿಂದೂ ಬಾಂಧವರು ಮತ್ತು ಹನುಮಾಭಿಮಾನಿಗಳು ಮತ್ತು  ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿ ಶ್ರೀ ಹನುಮೋತ್ಸವವನ್ನು
ಯಶಸ್ವಿ ಗೊಳಿಸಲು ಸಮಿತಿಯ  ಸದಸ್ಯರು ಕೋರಿದ್ದಾರೆ.

error: Content is protected !!