ಹಾಸನ: ಕ್ರಿಸ್ಮಸ್ ಹಬ್ಬಕ್ಕೆ ಶಾಲೆಗಳಿಗೆ ಒಂದು ದಿನ ಮಾತ್ರವೇ ರಜೆ ನೀಡಬೇಕು: ಹೆಚ್ಚುದಿನ ರಜೆಗೆ ಅವಕಾಶ ನೀಡಿದರೆ ಪ್ರತಿಭಟನೆ ಎಚ್ಚರಿಕೆ

ಹಾಸನ: ಕ್ರಿಸ್ಮಸ್ ಹಬ್ಬಕ್ಕೆ ಒಂದು ದಿನ ಮಾತ್ರ ರಜೆ ಕೊಡಲು ಸರ್ಕಾರದ ಆದೇಶವಿದ್ದರೂ, ಅದನ್ನು ಉಲ್ಲಂಘಿಸಿ ಕ್ರಿಶ್ಚಿಯನ್ ಆಡಳಿತದಲ್ಲಿರುವ ಖಾಸಗಿ ಶಾಲೆಗಳಿಗೆ ಏನಾದರೂ ಹೆಚ್ಚಿನ ರಜೆ ನೀಡಿದರೆ ದೊಡ್ಡ ಮಟ್ಟದ ಪ್ರತಿಭಟನೆ ಮಾಡುವುದಾಗಿ ಶ್ರೀರಾಮಸೇನೆ ದಕ್ಷಿಣ ಪ್ರಾಂತ್ಯ ಸಹ ಕಾರ್ಯದರ್ಶಿ ಜಾನೆಕೆರೆ  ಹೇಮಂತ್ ಎಚ್ಚರಿಕೆ ನೀಡಿದರು.

ಈ ಸಂಬಧ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಮುಂದೆ ಪ್ರತಿಭಟಿಸಿ ಡಿಡಿಪಿಐ ಬಲರಾಮ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ಸರ್ಕಾರದ ಅಧಿಸೂಚನೆಂ ಪ್ರಕಾರ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳು, ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲಾ-ಕಾಲೇಜುಗಳು ನಿಗದಿತ ರಜೆ ದಿನಗಳಲ್ಲಿ ಕಡ್ಡಾಯವಾಗಿ ರಜೆ ಘೋಷಿಸಬೇಕಾಗಿದೆ.

ಆದರೆ ಕೆಲವು ಖಾಸಗಿ ಶಾಲೆಗಳು,ವಿಶೇಷವಾಗಿ ಕ್ರಿಶ್ಚಿಯನ್ ಆಡಳಿತದಲ್ಲಿರುವ ಸಂಸ್ಥೆಗಳು,ಸರ್ಕಾರದ ರಜೆ ಆದೇಶವನ್ನು ಉಲ್ಲಂಘಿಸಿ ದಸರಾ ರಜೆಯನ್ನು ರದ್ದು ಮಾಡಿ ತರಗತಿಗಳು ಹಾಗೂ ಪರೀಕ್ಷೆಗಳನ್ನು ನಡೆಸಿರುವುದು ಗಂಭೀರ ಅನ್ಯಾಯವಾಗಿದೆ ಎಂದು ದೂರಿದರು.

ಡಿ.25 ಕ್ರಿಸ್‌ಮಸ್ ಹಬ್ಬಕ್ಕೆ ಸರ್ಕಾರ ಅಧಿಕೃತವಾಗಿ ಒಂದು ದಿನ ರಜೆ ಮಾತ್ರ  ಘೋಷಿಸಿದೆ. ಆದರೆ ಅನಧಿಕೃತವಾಗಿ ಕೆಲವು ಕ್ರಿಶ್ಚಿಯನ್ ಮೇಲುಸ್ತುವಾರಿಯ ಶಾಲೆಗಳು 10 ದಿನಗಳವರೆಗೆ ರಜೆ ಘೋಷಿಸುತ್ತಿರುವುದು ಸಂಪೂರ್ಣವಾಗಿ ಕಾನೂನು ಬಾಹಿರ ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ.

ಈ ಶಾಲೆಗಳಲ್ಲಿ ಶೇ.99 ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಹಿಂದು ಸಮುದಾಯದವರೇ ಆಗಿದ್ದರೂ, ಅವರ ಮೇಲೆ ಕ್ರಿಶ್ಚಿಯನ್ ಧಾರ್ಮಿಕ ಆಚರಣೆಗಳನ್ನು ಬಲವಂತವಾಗಿ ಹೇರಲು ಪ್ರಯತ್ನಿಸುವುದು ಧಾರ್ಮಿಕ-ಸಾಂಸ್ಕöÈತಿಕ ಹಸ್ತಕ್ಷೇಪ  ಮಾಡಿದಂತಾಗುತ್ತದೆ ಎಂದು ಕಿಡಿ ಕಾರಿದರು. ಅನಧಿಕೃತವಾಗಿ ದೀರ್ಘ ಅವಧಿಯ ಕ್ರಿಸ್‌ಮಸ್ ರಜೆ ಘೋಷಿಸುವ  ಅಭ್ಯಾಸ ನಿಲ್ಲಿಸಬೇಕು.

ಮುಂದಿನ ದಿನಗಳಲ್ಲಿ ಯಾವುದೇ ಧಾರ್ಮಿಕ ಪ್ರಾಬಲ್ಯವನ್ನು ವಿದ್ಯಾರ್ಥಿಗಳ ಮೇಲೆ ಹೇರಬಾರದು., ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ನಿಷೇಧ ಜಾರಿಗೊಳಿಸಬೇಕು  ಎಂದರು. ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ  ರಾಜ್ಯಾದ್ಯಂತ ಕ್ರಿಶ್ಚಿಯನ್ ನಿರ್ವಹಿತ ಶಾಲೆಗಳ ವಿರುದ್ಧ ಹಿಂದು ಸಮುದಾಯದ ವತಿಯಿಂದ ಭಾರೀ ಮಟ್ಟದ ಪ್ರತಿಭಟನೆ  ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ಧರ್ಮನಾಯಕ, ಜಿಲ್ಲಾ ಉಪಾಧ್ಯಕ್ಷ ಪ್ರದೀಪ್, ನಗರಾಧ್ಯಕ್ಷ ದರ್ಶನ್, ತಾಲೂಕು ಅಧ್ಯಕ್ಷ ಜಗದೀಶ್, ಗೋರಕ್ಷಕ ಪ್ರಮುಖ ವಿನಯ್, ತಾಲೂಕು ಉಪಾಧ್ಯಕ್ಷ ಅಜಿತ್, ಕಾರ್ಮಿಕ ವಿಭಾಗದ ದೊರೆಸ್ವಾಮಿ, ಕಾರ್ಯದರ್ಶಿ ಬಸವರಾಜು, ಮಹೇಶ್ ಬಾಗಲಕೋಟೆ, ಪ್ರವೀಣ್ ಇತರರು ಉಪಸ್ಥಿತರಿದ್ದರು.