4.2 C
Munich
Home ಜಿಲ್ಲೆ ಸಕಲೇಶಪುರ: ಹೆಗಲು ಮೇಲೆ ಕೇಸರಿ ಶಲ್ಯ, ಹಣೆ ಮೇಲೆ ತಿಲಕ ಇಟ್ಟುಕೊಳ್ಳುವುದರಿಂದ ಧರ್ಮ ಉಳಿಯುವುದಿಲ್ಲ: ತೆಂಕಲಗೂಡು...

ಸಕಲೇಶಪುರ: ಹೆಗಲು ಮೇಲೆ ಕೇಸರಿ ಶಲ್ಯ, ಹಣೆ ಮೇಲೆ ತಿಲಕ ಇಟ್ಟುಕೊಳ್ಳುವುದರಿಂದ ಧರ್ಮ ಉಳಿಯುವುದಿಲ್ಲ: ತೆಂಕಲಗೂಡು ಶ್ರೀ

ಸಕಲೇಶಪುರ: ಹೆಗಲು ಮೇಲೆ ಕೇಸರಿ ಶಲ್ಯ, ಹಣೆ ಮೇಲೆ ತಿಲಕ ಇಟ್ಟುಕೊಂಡರೆ ಸಾಲದು ಧರ್ಮದ ರಕ್ಷಣೆಗೆ ಮುಂದಾದಾಗ ಮಾತ್ರ ಹಿಂದುತ್ವ ಉಳಿಯಲು ಸಾಧ್ಯ ಎಂದು ತೆಂಕಲಗೂಡು ಚನ್ನ ಸಿದ್ದೇಶ್ವರ ಸ್ವಾಮಿಗಳು ಹೇಳಿದರು.

ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದತ್ತ ಮಾಲ ಅಭಿಯಾನ ಅಂಗವಾಗಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ವತಿಯಿಂದ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಧರ್ಮ ಯಾರಿಗೂ ಬೇಡ ಎಂಬ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಮೆರಿಕಾ ದೊಡ್ಡಣ್ಣ ರೀತಿಯಲ್ಲಿ ಜಗತ್ತಿನ ಕಪಿಮುಷ್ಟಿ ಯಲ್ಲಿ ಇಟ್ಟುಕೊಂಡಿದ್ದು ಇಂಗ್ಲೆಂಡ ಸಹ ಅದೇ ರೀತಿಯಲ್ಲಿ ಅರ್ಧ ಜಗತ್ತನ್ನು ಹಿಡಿತ ದಲ್ಲಿ ಇಟ್ಟುಕೊಂಡಿತ್ತು.ಆದರೆ ಭಾರತ ತಾನಾಗಿಯೇ ಯಾವ ದೇಶದ ಮೇಲು ದಂಡೆತ್ತಿ ಹೋಗಿಲ್ಲ, ಹಿಂದುಗಳ ಸಹನೆ ಹೆಚ್ಚಾಗಿದ್ದು ಹೀಗಾಗಿ ಧರ್ಮದ ಮೇಲೆ ಪೆಟ್ಟು ಬೀಳುತ್ತಿದೆ. ಹಿಂದುತ್ವ ಆಚರಣೆಯಲ್ಲಿ ಇರಬೇಕು ಯಾರು ಧರ್ಮ ಕಾಪಾಡುತ್ತರೋ ಅವರು ಉಳಿಯುತ್ತಾರೆ.

ನಾವು ಎಚ್ಚೆತ್ತುಕೊಳ್ಳದಿದ್ದರೆ ಧರ್ಮ ಉಳಿಯಲು ಸಾಧ್ಯ ಇಲ್ಲ, ಲಕ್ಷಾಂತರ ಮಂದಿಯ ತ್ಯಾಗ ದಿಂದ ಅಯೋಧ್ಯೆ ನಮ್ಮದಾಯಿತು. ಹಿಂದುಗಳ ರಕ್ಷಣೆಗೆ ಸಂಘಟನೆ ಅನಿವಾರ್ಯತೆ ಹೆಚ್ಚಿದೆ. ಒಟ್ಟಿಗೆ ಹೋದರೆ ಮಾತ್ರ ಸಂಘಟನೆ ಸದೃಢವಾಗುತ್ತದೆ ಎಂದರು.

ಹೀಗಾಗಿ ಪ್ರತಿಯೊಬ್ಬರೂ ವೈಯಕ್ತಿಕ ಜವಾಬ್ದಾರಿ ಅರಿಯಬೇಕು.
ಸನಾತನ ಹಿಂದೂ ಧರ್ಮದ ಪರಂಪರೆ ಅರ್ಥ ಮಾಡಿಕೊಂಡು ಧರ್ಮದ ಪರ ಎಲ್ಲರೂ ನಿಲ್ಲಬೇಕು ಎಂದರು.

ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ,ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮುಖಂಡರುಗಳಾದ ಕರಡಿಗಾಲ ಹರೀಶ್, ಬಿರಡಹಳ್ಳಿ ಬಾಲಕೃಷ್ಣ, ವಿಜಯ್ ಕುಮಾರ್,ರಘುಪ್ರಸಾದ್, ಮಹೇಂದ್ರ,ವಿಷ್ಣು ಇತರರು ಹಾಜರಿದ್ದರು

error: Content is protected !!