ಹಾಸನ: ಯೋಗಾದಲ್ಲಿ ತ್ರಿಭುವನ್‌ ಸಾಂಗತ್ಯಗೌಡ ಇಂಡಿಯಾ ಬುಕ್ ಆಪ್ ರೆಕಾರ್ಡ್ ಸಾಧನೆ

ಹಾಸನ: ಬೇಲೂರಿನ ಬಿ.ಎಂ. ಮಹೇಶ ಹಾಗೂ ಡಾ. ಎನ್. ಎ ಶ್ವೇತಾ ದಂಪತಿಗಳ ಪುತ್ರ ತ್ರಿಭುವನ್ ಸಾಂಗತ್ಯಗೌಡ ಅವರು ಯೋಗಾದಲ್ಲಿ ಇಂಡಿಯಾ ಬುಕ್ ಆಪ್ ರೆಕಾರ್ಡ್ ಸಾಧನೆ ಮಾಡಿದ್ದಾನೆ ಎಂದು ಅಂತರಾಷ್ಟ್ರೀಯ ಮಟ್ಟದ ಯೋಗ ತರಬೇತುದಾರ ಹಾಗೂ ತೀರ್ಪುಗಾರರ ಡಾ. ಕೆ.ಆರ್. ನವೀನ್ ಕುಮಾರ್ ಕಡೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ವರ್ಷದ ತಿಭುವನ್ ಸಾಂಗತ್ಯ ಗೌಡ ಅವರು ಐದನೇ ತರಗತಿ ವ್ಯಾಸಂಗಮಾಡುತ್ತಿದ್ದು ಕಳೆದ ಎರಡು ವರ್ಷಗಳಿಂದ ನಮ್ಮ ಬಳಿ ಆನ್ಸೆನ್ ಹಾಗು ಆಫೈನ್ ನಲ್ಲಿ ಯೋಗಾ ತರಬೇತಿ ಪಡೆಯುತ್ತಿದ್ದು ಕಳೆದ ಡಿ. 16 ರಂದ ಯೋಗಾದ ಭೂ ಮಾಸನವನ್ನು ಸತತ 1 ಗಂಟೆ 1 ನಿಮಿಷ 15 ಸೆಕೆಂಡ್ ಗಳ ಕಾಲ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿರುವುದಾಗಿ ತಿಳಿಸಿದರು.

ಜ. 17 ರಿಂದ 20 ರ ವರೆಗೆ ಮಲೇಷಿಯಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಇಂಡೋ- ಮಲೇಷಿಯಾ ಚಾಂಪಿನಯ್ ಶಿಪ್ ನಲ್ಲಿ 15 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಅಲ್ಲದೆ ಕಡೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ತ್ರಿಭುವನ್ ಸಾಂಗತ್ಯ ಅವರು ಕೇವಲ ಯೋಗ ಮಾತ್ರವಲ್ಲದೆ ಕರಾಟೆಯಲ್ಲೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ ಎಂದು ತಿಳಿಸಿದರು. ಪೋಷಕರಾದ ಬಿ.ಎಂ. ಮಹೇಶ ಹಾಗೂ ಡಾ. ಎನ್. ಎ ಶ್ವೇತಾ ಹಾಜರಿದ್ದರು.