ಹಾಸನ: ನಟ ಯಶ್ ತಾಯಿ ಪುಷ್ಪಾ‌ ವಿರುದ್ಧ ಸೈಟ್ ಒತ್ತುವರಿ ಆರೋಪ ಪ್ರಕರಣ- ಇಬ್ಬರ ಬಳಿ ಇವೆ ಪಕ್ಕಾ ದಾಖಲೆಗಳು!

ಹಾಸನ: ನಟ, ರಾಕಿಂಗ್ ಸ್ಟಾರ್ ಯಶ್ ತಾಯಿ ವಿರುದ್ಧ ಜಾಗ ಒತ್ತುವರಿ ಕೇಸ್ ಪ್ರಕರಣರ ಈಗ ಸಾಕಷ್ಟು ಮಹತ್ವವನ್ನು‌ ಪಡೆದುಕೊಂಡಿದೆ. ನಿನ್ನೆ ಮೂಲ ಜಾಗದ ಮಾಲೀಕರು ಸ್ಥಳಕ್ಕೆ ಬಂದು ಅಕ್ರಮವಾಗಿ ಹಾಕಿದ್ದ ಕಾಂಪೌಂಡ್ ಅನ್ನು ತೆರವು ಮಾಡಿದ್ರೆ, ಇಂದು ಕಾಂಪೌಂಡ್ ತೆರವು ಮಾಡಿದ್ದ ಮಾಲೀಕರ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಪುಷ್ಪಾ ಅವರ ಪರವಾಗಿ ಮನೆಯ ಕೆಲಸಗಾರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು, ಅವರ ಬಳಿ ದಾಖಲೆಗಳೇ ಇಲ್ಲ, ನಮ್ಮ ಜಾಗಕ್ಕೆ ಬಂದು ಕಾಂಪೌಂಡ್ ತೆರವು ಮಾಡಿದ್ದಾರಲ್ಲದೇ ಪ್ರಾಣಬೆದರಿಕೆಯನ್ನೂ ಹಾಕಿದ್ದಾರೆ ಅಂತಾ ದೂರು ಕೊಟ್ಟಿದ್ದಾರೆ…

ನಟ ರಾಕಿಂಗ್ ಸ್ಟಾರ್ ಯಶ್ ತಾಯಿ ವಿರುದ್ಧ ಸೈಟ್ ಒತ್ತುವರಿ ಆರೋಪ ಪ್ರಕರಣ… ಕಾಂಪೌಂಡ್ ತೆರವು ಮಾಡಿದ್ದ ದೇವರಾಜ್ ವಿರುದ್ಧ ಪ್ರಕರಣ ದಾಖಲು.. ಪಿಡಿಓ ನಟರಾಜ್ ವಿರುದ್ಧವೂ ದಾಖಲಾಯ್ತು ಕೇಸ್… ಹೌದು, ನಿನ್ನೆ ನಟ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅಕ್ರಮವಾಗಿ ತಮ್ಮ ಮನೆಯ ಪಕ್ಕದ ಖಾಲಿ‌ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿ, ಈ ಜಾಗವನ್ನು ಲಕ್ಷ್ಮಮ್ಮ ಎಂಬುವವರು ನನಗೆ ಈ ಜಾಗವನ್ನು ಜಿಪಿಎ ಮಾಡಿದ್ದಾರೆಂದು ದೇವರಾಜು ಎಂಬುವವರು ನ್ಯಾಯಾಲಯದ ಆದೇಶವನ್ನಿಡಿದು ಕಾಂಪೌಂಡ್ ಅನ್ನು ತೆರವು ಮಾಡಿದ್ರು.

ತೆರವು ಮಾಡಿದ್ದಲ್ಲದೇ ಅದೇ ಜಾಗದಲ್ಲಿ ತಂತಿಬೇಲಿಯಲ್ಲಿ ಹಾಕೋದಕ್ಕೆ ದೇವರಾಜ್ ಮುಂದಾಗಿದ್ರು. ಸಂಜೆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಡ್ತಿರೋ‌ಕ ಕೆಲಸವನ್ನು ತಡೆದು ನಿಲ್ಲಿಸಿದ್ರು. ಇದೀಗ ಕಾಂಪೌಂಡ್ ತೆರವು ಮಾಡಿದ್ದ ದೇವರಾಜ್ ವಿರುದ್ಧ ಹಾಸನದ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು‌‌ ಮಾಡಿದ್ದಾರೆ.

ಪುಷ್ಪಾ ಅರುಣ್ ಕುಮಾರ್ ಅವರ ಮನೆಯ ಕೆಲಸಗಾರ ದುರ್ಗಾಪ್ರಸಾದ್ ದೂರು ನೀಡಿದ್ದಾರೆ. ಪುಷ್ಪಾ ಅವರು ಬೆಂಗಳೂರಿನಲ್ಲಿದ್ದಾರೆ, ಅವರ ಸೂಚನೆಯ ಮೇರೆಗೆ ದೂರು‌ ನೀಡುತ್ತಿದ್ದೇನೆ ಅಂತಾ ದೂರು‌‌ ನೀಡಿದ್ದಾರೆ. ದೂರಿನಲ್ಲಿ ಜಿಪಿಎ ಹೋಲ್ಡರ್ ಎಂದಿರೋ‌ ದೇವರಾಜು ಹಾಗೂ ಪಿಡಿಓ ನಟರಾಜ್ ವಿರುದ್ಧ ದೂರು‌ ನೀಡಿದ್ದಾರೆ.‌

ಪುಷ್ಪಾ ಅವರಿಗೆ ಸೇರಿದ ಆಸ್ತಿಯಲ್ಲಿ ಕಾಂಪೌಂಡ್, ಶೆಡ್ ತೆರವು ಮಾಡಿದ್ದಾರೆ, ತೆರವು ಪ್ರಶ್ನಿಸಿದ್ದಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆಂದು ದುರ್ಗಾಪ್ರಸಾದ್ ದೂರಿನಲ್ಲಿ ಉಲ್ಲೇಖ‌ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ದುರ್ಗಾಪ್ರಸಾದ್, ದೇವರಾಜ್ ಹಾಗೂ ಲಕ್ಷ್ಮಮ್ಮ ಎಂಬುವವ ಜಾಗವೇ ಅಲ್ಲಿ ಇಲ್ಲ, ಅನಧಿಕೃತವಾಗಿ ಬಂದು ಕಾಂಪೌಂಡ್ ಒಡೆದು ಹಾಕಿದ್ದಾರೆ, ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಇದರ ಹಿಂದೆ ಪಿಡಿಓ ನಟರಾಜ್ ಎಂಬುವವರು ಇದ್ದಾರೆ. ಅವರೇ ಇವರೊಗೆ ಈ-ಸ್ವತ್ತು ಮಾಡಿಕೊಟ್ಟಿದ್ದಾರೆ.‌ ಕಳೆದ ಐದು ವರ್ಷಗಳಿಂದ ಜಾಗಕ್ಕೆ ಕಂದಾಯ ಕಟ್ಟಿದ್ದೇವೆ, ಅವರ ಬಳಿ ಇರುವ ದಾಖಲೆಗಳೆಲ್ಲವೂ ಸುಳ್ಳು ದಾಖಲೆಗಳು ಎಂದಿದ್ದಾರೆ..

ಒಟ್ನಲ್ಲಿ, ಪುಷ್ಪಾ ಅವರು ನಮ್ಮ ಬಳಿ ದಾಖಲೆಗಳಿವೆ ಅಂತಿದ್ದಾರೆ, ಇತ್ತ ನಮ್ಮ ಬಳಿಯೂ ದಾಖಲೆಗಳಿವೆ ಎಂದು ದೇವರಾಜ್ ಹೇಳ್ತಿದ್ದಾರೆ. ಇಬ್ಬರೂ ಇಲ್ಲಿಯವರೆಗೂ ಯಾವುದೇ ದಾಖಲೆಗಳನ್ನೂ ನೀಡಿಲ್ಲ. ಲಕ್ಷ್ಮಮ್ಮ ಅವರು ನನಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಅಂತಾ ದೇವರಾಜ್ ಅಂತಿದ್ದಾರೆ, ಆದ್ರೆ ಇಲ್ಲಿಯವರೆಗೂ ಆ ಮೂಲ ಲಕ್ಷ್ಮಮ್ಮ ಯಾರು? ಎಲ್ಲಿದ್ದಾರೆ? ಅವರಿಗೆ ಮಕ್ಕಳಿದ್ದೂ ಸಂಬಂಧವೇ ಇಲ್ಲದವರಿಗೆ ಯಾಕೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂಬುದೇ ನಿಗೂಢವಾಗಿದೆ.‌..