10.3 C
Munich
Home ಜಿಲ್ಲೆ ಹಾಸನ ಹಾಸನ ಎಲೈಟ್ ಶಾಲೆಯಲ್ಲಿ ನೇತ್ರತಪಾಸಣಾ ಶಿಬಿರ: ಮಕ್ಕಳು ಕಣ್ಣಿನ ಆರೋಗ್ಯ ರಕ್ಷಿಸಿಕೊಳ್ಳಲು ಆದ್ಯತೆ ನೀಡಿ- ಎಚ್.ಪಿ.ಕಿರಣ್...

ಹಾಸನ ಎಲೈಟ್ ಶಾಲೆಯಲ್ಲಿ ನೇತ್ರತಪಾಸಣಾ ಶಿಬಿರ: ಮಕ್ಕಳು ಕಣ್ಣಿನ ಆರೋಗ್ಯ ರಕ್ಷಿಸಿಕೊಳ್ಳಲು ಆದ್ಯತೆ ನೀಡಿ- ಎಚ್.ಪಿ.ಕಿರಣ್ ಗೌಡ ಕರೆ

Hassan: The annual free eye check-up camp organized for students and parents at Elite School in Hemavathi Nagar was successfully conducted.

ಹಾಸನ: ಹೇಮಾವತಿ ನಗರದ ಎಲೈಟ್ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಆಯೋಜಿಸಲಾಗಿದ್ದ ವಾರ್ಷಿಕ ಉಚಿತ ಕಣ್ಣಿನ ತಪಾಸಣೆ ಶಿಬಿರ ಯಶಸ್ವಿಯಾಗಿ ನಡೆಯಿತು.

ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕಿರಣ್ ಎಚ್.ಪಿ. ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಣ್ಣು ಮಾನವನ ಅತ್ಯಂತ ಸೂಕ್ಷ್ಮ ಅಂಗವಾಗಿದ್ದು, ಪ್ರತಿವರ್ಷ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಅದರ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ಹೇಳಿದರು.

ಶಾಲೆಯ ಆಡಳಿತ ಮಂಡಳಿ ಖಜಾಂಚಿ ಸಪ್ನಕಿರಣ್ ಮಾತನಾಡಿ, ಕಣ್ಣಿನ ಪ್ರಾಮುಖ್ಯತೆ ಮತ್ತು ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು.

ಸುನಂದ ಕಣ್ಣಿನ ಆಸ್ಪತ್ರೆಯ ತಜ್ಞರಾದ ಡಾ. ಸುಶ್ಮಿತಾ, ಡಾ.ನವೀನ್ ಮತ್ತು ತಂಡದವರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರ ಕಣ್ಣಿನ ತಪಾಸಣೆ ನಡೆಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ನಾಗರಾಜು ಕೆ.ಎಂ., ಪ್ರಾಂಶುಪಾಲರು, ಶಿಕ್ಷಕರು, ಪೋಷಕರು, ಬೋಧಕ/ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!