ಹಾಸನ: ತಹಸೀಲ್ದಾರ್ ಕಚೇರಿಯಲ್ಲಿ ದಲ್ಲಾಳಿಗಳ ಕಾಟಕ್ಕೆ ಕಡಿವಾಣ

Hassan Tahsildar Geeta has taken a bold step to avoid the menace of middlemen operating in the Tahsildar's office.

ಹಾಸನ: ತಹಸೀಲ್ದಾರ್ ಗೀತಾ ಅವರು ತಹಸೀಲ್ದಾರ್ ಕಚೇರಿಯಲ್ಲಿ ನಡೆಯುತ್ತಿದ್ದ ಮಧ್ಯವರ್ತಿಗಳ ಕಾಟ ತಪ್ಪಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಕಚೇರಿಗೆ ಬರುವ ರೈತರು ಹಾಗೂ ಸಾರ್ವಜನಿಕರಿಗೆ ನೇರವಾಗಿ ಮಾಹಿತಿ ಸಿಗುವಂತೆ, ಪ್ರತಿಯೊಂದು ಕಾರ್ಯಕ್ಕೆ ಸಂಬಂಧಿಸಿದ ಕ್ರಮಗಳು ಹಾಗೂ ನಿಗದಿತ ಶುಲ್ಕವನ್ನು ಸ್ಪಷ್ಟವಾಗಿ ಗೋಡೆ ಮೇಲೆ ನೋಟಿಸ್–ಪೋಸ್ಟರ್‌ಗಳ ಮೂಲಕ ಪ್ರಕಟಿಸಲು ಮುಂದಾಗಿದ್ದಾರೆ.

ರೈತರು ಪಡೆಯುವ ದಾಖಲೆಗಳಿಗೆ ಮೊದಲ ಪುಟಕ್ಕೆ ₹9 ಹಾಗೂ ನಂತರದ ಪ್ರತೀ ಪುಟಕ್ಕೆ ₹8 ಶುಲ್ಕ ನಿಗದಿಪಡಿಸಲಾಗಿದೆ. ಯಾವ ಕೆಲಸಕ್ಕೆ ಎಷ್ಟು ಹಣ, ಯಾವ ಕ್ರಮ ಅನುಸರಿಸಬೇಕು ಎಂಬುದನ್ನು ನೇರವಾಗಿ ರೈತರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸುವುದು ಈ ಕ್ರಮದ ಉದ್ದೇಶವಾಗಿದೆ.

ಈ ನೂತನ ವ್ಯವಸ್ಥೆಯಿಂದ ದಲ್ಲಾಳಿಗಳ ಅವಲಂಬನೆ ಕಡಿಮೆಯಾಗುವ ಜೊತೆಗೆ ರೈತರಿಗೆ ಸಮಯ ಹಾಗೂ ಹಣ ಉಳಿಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Hassan Tahsildar Geeta has taken a bold step to avoid the menace of middlemen operating in the Tahsildar’s office.