ಹಾಸನ: ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿಗಳ ವಿಲೇವಾರಿಯಲ್ಲಿ ಹಾಸನ ಜಿಲ್ಲೆಯು ರಾಜ್ಯದಲ್ಲೇ ನಾಲ್ಕುನೇ ಸ್ಥಾನದಲ್ಲಿದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿದರು.
ಜಿಲ್ಲಾ ಪಂಚಾಯಿತಿ ಹೇಮಾವತಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಕಾಯಿದೆಗೆ ಹಾಸನ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಇದೆ. ಆರ್ ಟಿ ಐ ಪ್ರಾರಂಭವಾದಾಗಿನಿಂದಲೂ ಒಟ್ಟಿ 7335 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 7142 ಅರ್ಜಿ ವಿಲೇವಾರಿ ಮಾಡಲಾಗಿದೆ. 7295 ಪ್ರಕರಣಗಳಲ್ಲಿ ಅರ್ಜಿದಾರರು ತೃಪ್ತರಾಗಿದ್ದು ಉಳಿದ ಅರ್ಜಿಗಳು ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಆರ್ ಟಿ ಐ ಕಾಯಿದ ಬಂದು 20 ವರ್ಷ ಆಗಿದೆ. ಇಲ್ಲಿಯ ವರೆಗೂ ರಾಜ್ಯದಲ್ಲಿ ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆ ಅಧಿಕಾರಿಗಳಿಗೆ ಒಟ್ಟು 10.13 ಕೋಟಿ ದಂಡ ವಿಧಿಸಲಾಗಿದೆ. ಇದರಲ್ಲಿ ಕೇವಲ 2.07 ಕೋಟಿ ದಂಡ ಮಾತ್ರ ವಸೂಲಾಗಿದೆ. ಹಾಸನ ಜಿಲ್ಲೆಯ ಮಾಹಿತಿ ನೀಡದ 217 ಅಧಿಕಾರಿಗಳಿಗೆ 17.09 ಲಕ್ಷ ವಿಧಿಸಲಾಗಿತ್ತು. ಅದರಲ್ಲಿ 4.4 ಲಕ್ಷ ಮಾತ್ರ ದಂಡ ವಸೂಲಿ ಮಾಡಲಾಗಿದೆ
ನಾವು ಅಧಿಕಾರಕ್ಕೆ ಬಂದಾಗ 55498 ಅರ್ಜಿಗಳು ಬಾಕಿ ಇದ್ದವು. ಪ್ರಸ್ತುತ 35344 ಕ್ಕೆ ಇಳಿದಿದೆ. ಇವುಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಗಟ್ಟಿಗೊಳಿಸಲು ಜಾರಿಯಾದ ಮಾಹಿತಿ ಹಕ್ಕು ಕಾಯಿದೆಯನ್ನು ಮತ್ತಷ್ಟು ಬಲಪಡಿಸಲು ನಾವು ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಮಾಡಕಾಗುತ್ತಿದೆ. ಇದುವರೆಗೂ ಹದಿನಾಲ್ಕ ಜಿಲ್ಲೆಯಲ್ಲಿ ಕಾರ್ಯಾಗಾರ ಮಾಡಲಾಗಿದೆ.
ನಾವು ಬಂದ ಮೇಲೆ ಸರ್ಕಾರಕ್ಕೆ ಹಲವಾರು ಶಿಫಾರಸು ಮಾಡಿದ್ದೇವೆ. ಅದರಲ್ಲ ಪ್ರಮುಖವಾಗಿ ಕಪಿಎಸ್ ಸಿ ಪರೀಕ್ಷೆಗಳಲ್ಲಿ ಆರ್ ಟಿ ಐ ಸೇರ್ಪಡೆಗೊಳಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಜೊತೆಗೆ ಕೆಡಿಪಿ ಸಭೆಯಲ್ಲೂ ಆರ್ ಟಿ.ಐ ಅರ್ಜಿ ವಿಲೇವಾರೊ ಬಗ್ಗೆ ಚರ್ಚಿಸುವಂತೆ ಶಿಪಾರನ್ನು ಮಾಡಲಾಗಿದೆ.
ರಾಜ್ ಶೇಖರ್ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣ 28 ಸಾವಿರ ಪ್ರಕರಣಗಳು ಬಾಕಿ ಇದ್ದರೆ ಉಳಿದ ಜಿಲ್ಲೆಗಳಲ್ಲಿ 33 ಸಾವಿರ ಪ್ರಕರಣ ಬಾಕಿ ಇದೆ.
ಅಧಿಕಾರಿಗಳು ಕ್ರಮ ಕೈಗೊಂಡರೆ ಮಾತ್ರ ದುರುಪಯೋಗ ತಡೆಯಲು ಸಾಧ್ಯ. ಬ್ಲಾಕ್ ಮೇಲರ್ ಗಳ ಸೃಷ್ಟಿಗೆ ಅಧಿಕಾರಿಗಳು ಅವಕಾಶ ನೀಡದಂತೆ ನಿಗದಿತ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದ ಸಖಾ ಸುಮ್ಮನೆ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ತೊಂದರೆ ನೀಡುತ್ತಿದ್ದ 28 ಜನರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದೆ ಎಂದು ತಿಳಿಸಿದರು.










