ಹಾಸನ(kannadapost.com): ಇಲ್ಲಿನ ಸ್ಕಾಲರ್ಸ್ ಇಂಟರ್ನ್ಯಾಷನಲ್ ಶಾಲೆ ಹಾಗೂ ಸ್ಕಾಲರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನವರಾತ್ರಿ ಉತ್ಸವದ ಐದನೇ ದಿನದ ಅಂಗವಾಗಿ ಶ್ರೀ ಸ್ಕಂದಮಾತಾ ದೇವಿಯ ಆರಾಧನೆಯನ್ನು ಗುರುವಾರ ಆಚರಿಸಲಾಯಿತು.
ಪಂಚಮಿ ದಿನದ ನಿಮಿತ್ತ ನಿಗದಿಪಡಿಸಲಾಗಿದ್ದ ಹಳದಿ ಬಣ್ಣದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸಂಸ್ಥೆಯ ಕಾರ್ಯದರ್ಶಿ ಮಮತಾ ಚಂದ್ರಶೇಖರ್ ಹಾಗೂ ಮಹಿಳಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಮಮತಾ ಚಂದ್ರಶೇಖರ್, “ಶ್ರೀ ಸ್ಕಂದಮಾತಾ ದೇವಿಯ ಕೃಪೆಯಿಂದ ಸಮಾಜದಲ್ಲಿ ಶಾಂತಿ, ಸುಖ ಹಾಗೂ ಸದ್ಬುದ್ಧಿ ನೆಲೆಸಲಿ” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.












