ಹಾಸನ: ಸಂಜೀವಿನಿ ಆಸ್ಪತ್ರೆ ಸಿಬ್ಬಂದಿಗೆ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಖಡಕ್ ಎಚ್ಚರಿಕೆ

Hassan, President and MLA H.P. Swarup Prakash Khadak, warned the staff of Sanjeevini Cooperative Hospital, who have been behaving in an indisciplined manner

ಹಾಸನ: ಅಶಿಸ್ತು ರೂಢಿಸಿಕೊಂಡಿರುವ ಸಂಜೀವಿನಿ ಸಹಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಖಡಕ್ ಎಚ್ಚರಿಕೆ ನೀಡಿದರು.

ಸಂಸ್ಥೆಯ ಸಭಾಂಗಣದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಂಜೀವಿನಿ ಸಹಕಾರಿ ಆಸ್ಪತ್ರೆ ನಷ್ಟದಲ್ಲಿ ನಡೆಯುತ್ತಿದ್ದರೂ ಜನರಿಗೆ ಸೇವೆ ನೀಡುವ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಇದರ ನಡುವೆ ಯಾವುದೇ ಸಿಬ್ಬಂದಿಗಳಿಗೆ ಸಂಬಳದ ಕೊರತೆ ಮಾಡದಂತೆ ಅಚ್ಚುಕಟ್ಟಾಗಿ ನೋಡಿಕೊಳ್ಳಲಾಗುತ್ತಿದೆ.
ಆದರಿಲ್ಲಿ ಹಲವರ ಬಗ್ಗೆ ದೂರು ಕೇಳಿ ಬರುತ್ತಿವೆ. ಇಂತಹ ದೂರುಗಳು ಮತ್ತೆ ಮರುಕಳಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಕೆಲ ಡಿ. ಗ್ರೂಪ್ ಸಿಬ್ಬಂದಿ ಬರುವ ರೋಗಿಗಳು ಹಾಗೂ ಅವರ ಕುಟುಂಬಸ್ಥರಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ದೂರು ಸಹ ಬಂದಿವೆ. ಇದಲ್ಲದೆ ವೈದ್ಯಕೀಯ ಸಿಬ್ಬಂದಿಗಳೂ ಕೂಡ ಮನ ಬಂದಂತೆ ತಮಗೆ ಬೇಕಾದಾಗ ಕೆಲಸಕ್ಕೆ ಬರುತ್ತಿರುವುದು ಕಂಡುಬಂದಿದೆ. ಇಂತಹ ಯಾವುದೇ ದೂರು ಮತ್ತೆ ಕೇಳಿ ಬಂದರೆ ಅಂಥವರನ್ನು ಕೆಲಸದಿಂದ ತೆಗೆದು ಹಾಕಲಾಗುವುದು ಎಂದು ವಾರ್ನಿಂಗ್ ಮಾಡಿದರು.

ಹಿರಿಯರಾದ ದಿ.ಹೆಚ್.ಎಸ್.ಪ್ರಕಾಶ್, ಡಾ.ಗುರುರಾಜ್ ಹೆಬ್ಬಾರ್, ಡಾ.ಮುನಿ ವೆಂಕಟೇಗೌಡರೂ ಸೇರಿದಂತೆ ಹಲವರು ಈ ಸಂಸ್ಥೆಯನ್ನು ಕಷ್ಟಪಟ್ಟು ಕಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗಬೇಕಿರುವುದು ಎಲ್ಲರ ಜವಾಬ್ದಾರಿ. ಇದರಲ್ಲಿ ಸಣ್ಣ ಲೋಪ ಕಂಡುಬಂದರೂ ಸಹಿಸುವುದಿಲ್ಲ ಎಂದರು. ಆಸ್ಪತ್ರೆಯ ನಿರ್ದೇಶಕರಿದ್ದರು.

Hassan, President and MLA H.P. Swarup Prakash Khadak, warned the staff of Sanjeevini Cooperative Hospital, who have been behaving in an indisciplined manner