ಹಾಸನ ಫೆಬ್ರವರಿ,23,2026 (www.kannadapost.com): ನೂತನ ಜಿಲ್ಲಾ ಭವನ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ನಡೆದ ಪರಿಶೀಲನಾ ಸಭೆಯಲ್ಲಿ ಹಲವು ಗಂಭೀರ ಅಂಶಗಳು ಬೆಳಕಿಗೆ ಬಂದಿವೆ. ಮೂಲ ಆದೇಶದಲ್ಲಿ ₹10 ಕೋಟಿ ಮಂಜೂರಾಗಿದ್ದ ಕಟ್ಟಡ ವೆಚ್ಚ ಇದೀಗ ₹55 ಕೋಟಿಗೆ ಏರಿರುವುದು ಚರ್ಚೆಗೆ ಕಾರಣವಾಗಿದೆ.
ವೆಚ್ಚ ಏರಿಕೆ ಕುರಿತು ಸಚಿವರ ಅಸಮಾಧಾನ
ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಸರ್ಕಾರದಿಂದ ಆದೇಶ ಇದ್ದದ್ದು ಕೇವಲ ₹10 ಕೋಟಿಗೆ ಮಾತ್ರ.
ಆದರೆ ಕಟ್ಟಡದ ಒಟ್ಟು ವೆಚ್ಚ ₹55 ಕೋಟಿಗೆ ಏರಿರುವುದಾಗಿ ತಿಳಿಸಲಾಗಿದೆ.
ಸರ್ಕಾರದ ಅನುಮತಿ G+1 ಕಟ್ಟಡಕ್ಕೆ ಮಾತ್ರ ಇತ್ತು.
ಆದರೆ ಕ್ಯಾಬಿನೆಟ್ ಅನುಮತಿ ಇಲ್ಲದೆ ಕಟ್ಟಡವನ್ನು G+3 ಮಟ್ಟಕ್ಕೆ ವಿಸ್ತರಿಸಲಾಗಿದೆ.
ಇದರ ಬಗ್ಗೆ ಅಧಿಕಾರಿಗಳ ವಿರುದ್ಧ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಂತ ಹಂತದ ಕಾಮಗಾರಿ – ಹೆಚ್ಚುವರಿ ಹಣದ ಬೇಡಿಕೆ
ಮೂಲ ಆದೇಶದಲ್ಲಿ ಮೊದಲ ಹಂತ, ಎರಡನೇ ಹಂತ ಎಂಬ ಯಾವುದೇ ಉಲ್ಲೇಖ ಇರಲಿಲ್ಲ.
ಆದರೂ ಕಾಮಗಾರಿ ಹಂತ ಹಂತವಾಗಿ ನಡೆಯುತ್ತಿದ್ದು, ಈಗಾಗಲೇ ಎರಡನೇ ಹಂತದ ಕಾಮಗಾರಿಗೆ ₹20 ಕೋಟಿ ವೆಚ್ಚವಾಗಿದೆ.
ಈಗಾಗಲೇ ನಡೆದ ಕೆಲಸಗಳಿಗೆ ₹6.97 ಕೋಟಿ ಬಿಲ್ ಪಾವತಿಸಬೇಕಿದ್ದು, ಹೆಚ್ಚುವರಿ ₹18 ಕೋಟಿ ಹಣವನ್ನು ಕಂದಾಯ ಇಲಾಖೆಯಿಂದ ಕೇಳಲಾಗಿದೆ.
ಪಿಲ್ಲರ್ ಸಂಖ್ಯೆ ದ್ವಿಗುಣ – ಸ್ಪಷ್ಟನೆ ಇಲ್ಲ
ಮೂಲ ಪ್ಲಾನ್‌ನಲ್ಲಿ 110 ಪಿಲ್ಲರ್ ಮಾತ್ರ ಇದ್ದರೂ, ಈಗ 220 ಪಿಲ್ಲರ್ ಹಾಕಲಾಗಿದೆ.
“ಅಷ್ಟೊಂದು ಪಿಲ್ಲರ್ ಏಕೆ?” ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇಲ್ಲದ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಮುಂದಿನ ಕ್ರಮ
ಮುಂದಿನ ವಾರ ತಾಂತ್ರಿಕ ತಂಡದೊಂದಿಗೆ ಮತ್ತೊಮ್ಮೆ ಸ್ಥಳ ಪರಿಶೀಲನೆ.
ನಿಖರ ಅಂದಾಜು ವರದಿ ಸಲ್ಲಿಸಿದರೆ ಹಣ ಬಿಡುಗಡೆಗೆ ಸಮ್ಮತಿ.
ಕಾಮಗಾರಿಗೆ ವೇಗ ನೀಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ.
ಸಭೆಯಲ್ಲಿ ಉಪಸ್ಥಿತರಿದ್ದವರು
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ವಲಯ ಆಯುಕ್ತ ಆದಿತ್ಯ ಆಮ್ಲಾನ್ ಬಿಶ್ವಾಸ್, ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಸೇರಿದಂತೆ ಮುಖ್ಯ ಇಂಜಿನಿಯರ್ ಹಾಗೂ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.










