27.4 C
Munich
Home News ಹಾಸನದಲ್ಲಿ ಆಗಸ್ಟ್ 10ರಿಂದ 12ರವರೆಗೆ ಮೂರು ದಿನಗಳ ನಾಟಕೋತ್ಸವ: ಹಾಸನಾಂಬ ಕಲಾಕ್ಷೇತ್ರದಲ್ಲಿ ರಂಗೋತ್ಸವಕ್ಕೆ ಸಜ್ಜು

ಹಾಸನದಲ್ಲಿ ಆಗಸ್ಟ್ 10ರಿಂದ 12ರವರೆಗೆ ಮೂರು ದಿನಗಳ ನಾಟಕೋತ್ಸವ: ಹಾಸನಾಂಬ ಕಲಾಕ್ಷೇತ್ರದಲ್ಲಿ ರಂಗೋತ್ಸವಕ್ಕೆ ಸಜ್ಜು

ಹಾಸನ, ಆ.7 (kannadapost.com): ಜಿಲ್ಲಾ ಕನ್ನಡ ಸಾಹಿತ್ಯಹಾಸನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾಸನ ಜಿಲ್ಲೆಯ ವಿವಿಧ ರಂಗಭೂಮಿ, ಸಾಮಾಜಿಕ ಮತ್ತು ಜಾನಪದ ಕಲಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 10ರಿಂದ 12ರವರೆಗೆ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮೂರು ದಿನಗಳ ನಾಟಕೋತ್ಸವ–2026 ಆಯೋಜಿಸಲಾಗಿದೆ.

ಕನ್ನಡ ರಂಗಭೂಮಿಯ ಶ್ರೇಷ್ಠ ನಾಟಕಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ನಾಟಕೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳ ಹೆಸರಾಂತ ರಂಗ ತಂಡಗಳು ಭಾಗವಹಿಸಲಿವೆ.

ಆಗಸ್ಟ್ 10ರಂದು ‘ಸ್ಮಶಾನ ಕುರುಕ್ಷೇತ್ರ’

ನಾಟಕೋತ್ಸವದ ಮೊದಲ ದಿನವಾದ ಆಗಸ್ಟ್ 10 (ಸೋಮವಾರ) ಸಂಜೆ 6.45ಕ್ಕೆ ಕುವೆಂಪು ಅವರ ಅಮರ ಕೃತಿ ‘ಸ್ಮಶಾನ ಕುರುಕ್ಷೇತ್ರ’ ನಾಟಕವನ್ನು ಹಾಸನದ ಸಂಸ್ಕೃತಿ ಟ್ರಸ್ಟ್ ಪ್ರದರ್ಶಿಸಲಿದೆ.

ಆಗಸ್ಟ್ 11ರಂದು ‘ಘಾಟಿ’

ಎರಡನೇ ದಿನವಾದ ಆಗಸ್ಟ್ 11 (ಮಂಗಳವಾರ) ಸಂಜೆ 6.45ಕ್ಕೆ ಮೈಸೂರಿನ ನಾಟ್ಯಲೇಖ ರಂಗಸಮೂಹದಿಂದ ‘ಘಾಟಿ’ ನಾಟಕ ಪ್ರದರ್ಶನಗೊಳ್ಳಲಿದೆ.

ಆಗಸ್ಟ್ 12ರಂದು ‘ಈದಿ’

ನಾಟಕೋತ್ಸವದ ಕೊನೆಯ ದಿನವಾದ ಆಗಸ್ಟ್ 12 (ಬುಧವಾರ) ಸಂಜೆ 6.45ಕ್ಕೆ ಉಡುಪಿ ಜಿಲ್ಲೆಯ ಕೊಡವೂರಿನ ಸಮನಸಾ ತಂಡ ‘ಈದಿ’ ನಾಟಕವನ್ನು ಪ್ರದರ್ಶಿಸಲಿದೆ.

15 ನಿಮಿಷ ಮುಂಚಿತವಾಗಿ ಆಗಮಿಸಲು ಮನವಿ

ಪ್ರತಿ ನಾಟಕವೂ ಸುಮಾರು ಒಂದು ಗಂಟೆಯಿಂದ ಒಂದೂವರೆ ಗಂಟೆ ಅವಧಿಯದ್ದಾಗಿರಲಿದೆ. ನಿಗದಿತ ಸಮಯಕ್ಕೆ ನಾಟಕ ಪ್ರದರ್ಶನ ಆರಂಭವಾಗಲಿರುವುದರಿಂದ, ರಂಗಾಸಕ್ತರು 15 ನಿಮಿಷಗಳ ಮುಂಚಿತವಾಗಿ ಕಲಾಕ್ಷೇತ್ರಕ್ಕೆ ಆಗಮಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಕುಟುಂಬ ಸಮೇತ ನಾಟಕೋತ್ಸವದಲ್ಲಿ ಭಾಗವಹಿಸಿ ಕನ್ನಡ ರಂಗಭೂಮಿಯನ್ನು ಬೆಂಬಲಿಸುವಂತೆ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದೆ.

error: Content is protected !!