Hassan Breaking: ಕಾರಿನಲ್ಲಿ ಎಂಡಿಎಂ ಸಾಗಾಟ – 40 ಗ್ರಾಂ ಡ್ರಗ್ಸ್ ಜಪ್ತಿ, ಐವರ ಬಂಧನ

ಹಾಸನ ರಾಜ್‌ಕುಮಾರ್ ನಗರ ಚೆಕ್‌ಪೋಸ್ಟ್ ಬಳಿ 40 ಗ್ರಾಂ MDMA ಜಪ್ತಿ. ₹2 ಲಕ್ಷ ಮೌಲ್ಯದ ಮದ್ದು ಸಾಗಾಟಕ್ಕೆ ಐವರು ಬಂಧನ, ಎರ್ಟಿಗಾ ಕಾರು ವಶಕ್ಕೆ.

ಹಾಸನ Hassan | ಫೆಬ್ರವರಿ 2026: ಮಾರಾಟಕ್ಕಾಗಿ ಎಂಡಿಎಂ (MDMA) ಡ್ರಗ್ಸ್ ಮಾರಾಟಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ಐವರನ್ನು ಹಾಸನ ಪೊಲೀಸರು ಬಂಧಿಸಿರುವ ಘಟನೆ ನಗರದ ರಾಜ್‌ಕುಮಾರ್ ನಗರ ಬಳಿಯ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ.

ಪೊಲೀಸರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕಾರನ್ನು ತಡೆದು ತಪಾಸಣೆ ನಡೆಸಿದ ವೇಳೆ, ಕಾರಿನಲ್ಲಿದ್ದ ಸುಮಾರು ₹2 ಲಕ್ಷಕ್ಕೂ ಅಧಿಕ ಮೌಲ್ಯದ 40 ಗ್ರಾಂ ಎಂಡಿಎಂ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಒಂದು ಎರ್ಟಿಗಾ ಕಾರನ್ನೂ ಜಪ್ತಿ ಮಾಡಲಾಗಿದೆ.

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳನ್ನು

  • ಪರ್ವೀಜ್ (29)
  • ಸುಹೇಲ್ (24)
  • ಅಬ್ದುಲ್ ಯಾಸಿನ್ (20)
  • ಇಬ್ರತ್ ಖಾನ್ (24)
  • ಸೈಯದ್ ಯೂಸಫ್ (23)

ಎಂದು ಗುರುತಿಸಲಾಗಿದೆ. ಬಂಧಿತರಲ್ಲಿ ನಾಲ್ವರು ಶಿವಮೊಗ್ಗ ಮೂಲದವರಾಗಿದ್ದು, ಓರ್ವ ಹಾಸನ ಮೂಲದವನಾಗಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸ್ ಕಾರ್ಯಾಚರಣೆ

ಪೆನ್‌ಮೊಹಲ್ಲಾ ಸಿಪಿಐ ಸ್ವಾಮಿನಾಥ್, ಪಿಎಸ್‌ಐ ರವಿಶಂಕರ್ ಹಾಗೂ ಕಾನ್ಸ್‌ಟೇಬಲ್‌ಗಳಾದ ಪ್ರಸನ್ನಕುಮಾರ್, ದಿಲೀಪ್, ಪುನೀತ್, ಲೋಕೇಶ್, ಹನುಮೇಶ್, ದಿಲೀಪ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಈ ಕುರಿತು ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.