ಹಾಸನ : ನಗರದ ಸಂತ ಅಂತೋಣಿ ದೇವಾಲಯದಲ್ಲಿ ಸೆಪ್ಟೆಂಬರ್ 8ರಂದು (ಸೋಮವಾರ) ಮಾತೆಯ ಜಯಂತ್ಯುತ್ಸವವನ್ನು ಆಯೋಜಿಸಲಾಗಿದೆ.
ಈ ಬಾರಿಯ ಜಯಂತ್ಯೋತ್ಸವದ ಧ್ಯೇಯ ವಾಕ್ಯ “ಭರವಸೆಯು ಹೊಸ ಜೀವನಕ್ಕೆ ರಹದಾರಿ” ಆಗಿದ್ದು, ಬೆಳಿಗ್ಗೆ 7 ಗಂಟೆಗೆ ಮೊದಲನೆಯ ಬಲಿಪೂಜೆಯೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ.
ಬೆಳಿಗ್ಗೆ 8.45ಕ್ಕೆ ನವ ತೆನೆಗಳ ಆಶೀರ್ವಚನ, ಮಾತೆಯ ಸ್ವರೂಪದೊಂದಿಗೆ ಮೆರವಣಿಗೆ, ನವೇನ ಹಾಗೂ ಹಬ್ಬದ ಸಾಂಭ್ರಮಿಕ ಬಲಿಪೂಜೆ ನಡೆಯಲಿದೆ.
ಜಯಂತ್ಯೋತ್ಸವದ ಆರಾಧನಾ ವಿಧಿಗಳನ್ನು ಪಾಲನಾ ಸಮಿತಿ ಹಾಗೂ ಆರ್ಥಿಕ ಸಮಿತಿಯವರು ನಿರ್ವಹಿಸಲಿದ್ದಾರೆ.










