ಹಾಸನ: ಮೈಸೂರು ವಲಯ ಮಟ್ಟದ ಮಾದರಿ ವಿಧಾನಸಭಾ ಸ್ಪರ್ಧೆಯಲ್ಲಿ ನಗರದ ಎಂ ಕೃಷ್ಣ ಕಾನೂನು ಕಾಲೇಜು ವಿದ್ಯಾರ್ಥಿ ಕೀರ್ತಿರಾಜ್ ಎಚ್. ಕೆ. ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಕಾನೂನು ಮತ್ತು ಸುಧಾರಣಾ ಸಂಸ್ಥೆ ಬೆಂಗಳೂರು ಹಾಗೂ ಜೆಎಸ್ಎಸ್ ಕಾನೂನು ಕಾಲೇಜು ಮೈಸೂರು ಅವರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2025ರ ಮೈಸೂರು ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ವಿಜೃಂಭಣೆಯಿಂದ ನೆರವೇರಿದ್ದು. ಸಂಸತ್ತೀಯ ನಡವಳಿಕೆಯ ಪ್ರದರ್ಶನದಲ್ಲಿ, ಹಾಸನದ ಎಂ. ಕೃಷ್ಣ ಕಾನೂನು ಕಾಲೇಜಿನ ವಿದ್ಯಾರ್ಥಿ ಕೀರ್ತಿರಾಜ್ ಅವರು ತಮ್ಮ ವಾಗ್ಪಟುತ್ವ, ಸಂಸದೀಯ ಪ್ರಜ್ಞೆ ಮತ್ತು ವಿಶ್ಲೇಷಣಾತ್ಮಕ ಪ್ರಸ್ತುತಿಯಿಂದ ಎಲ್ಲರ ಮೆಚ್ಚುಗೆ ಪಡೆದು, ವಿರೋಧಪಕ್ಷದ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು.

ಇದೀಗ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೈಸೂರು ವಲಯವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದಿದ್ದು.ವಿಶೇಷವೆಂದರೆ ಅವರು ಈ ಹಿಂದೆಯೂ ಎರಡು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಕೀರ್ತಿರಾಜ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.










