ಹಾಸನ : ಹಾಸನದ ಜ್ಞಾನಧಾರೆ ಪ್ರಥಮ ದರ್ಜೆ ಹಾಗೂ ಪದವಿ ಪೂರ್ವ ಕಾಲೇಜು ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಯುತ ಶಂಭುಲಿಂಗಪ್ಪ ಅವರು, “ಕಾರ್ಯಕ್ರಮಗಳ ಆಚರಣೆ ಕೇವಲ ತೋರ್ಪಡಿಕೆಗೆ ಮಾತ್ರ ಸೀಮಿತವಾಗಬಾರದು. ಕನ್ನಡ ನಾಡು–ನುಡಿ ನಮ್ಮ ಶಕ್ತಿ. ರಾಜ್ಯೋತ್ಸವವನ್ನು ಹೇಗೆ ಸಂಭ್ರಮಿಸುತ್ತೇವೋ ಅದಕ್ಕಿಂತ ಮುಖ್ಯ, ಅದರ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವುದು” ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕಿ ಶ್ವೇತಾ ಎಸ್. ಕಿಣಿ, ಆಕ್ಟಿವ್ ರೂರಲ್ ಎಜುಕೇಶನ್ ಟ್ರಸ್ಟ್ನ ಶ್ರೀ ಚಿಕ್ಕೇಗೌಡ, ಜ್ಞಾನಧಾರೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹೇಮಂತ್ ಕುಮಾರ್ ಹಾಜರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನಧಾರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕಾಂತರಾಜ ಎಂ.ಎನ್ ವಹಿಸಿದ್ದರು.










