ಹಾಸನ ಅಕ್ಟೋಬರ್,12,2026 (kannadapost.com): ನಗರದ ಗಾಂಧಿಬಜಾರ್ನಲ್ಲಿರುವ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಸ್ಥಾನದಲ್ಲಿ ಶ್ರೀ ಪರಾಭವ ನಾಮ ಸಂವತ್ಸರದ ಅಂಗವಾಗಿ ಅಕ್ಟೋಬರ್ 11ರಿಂದ 21ರವರೆಗೆ ಶರನ್ನವರಾತ್ರಿ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಹನ್ನೊಂದು ದಿನಗಳ ಕಾಲ ವಿವಿಧ ದೇವಿ ಅಲಂಕಾರಗಳು, ಹೋಮ-ಹವನಗಳು, ವಿಶೇಷ ಪೂಜೆಗಳು, ಭಜನೆ, ಭರತನಾಟ್ಯ ಹಾಗೂ ಭಕ್ತಿಗಾನ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 21ರಂದು ವಿಜಯದಶಮಿ ಆಚರಣೆಯೊಂದಿಗೆ ಮಹೋತ್ಸವಕ್ಕೆ ತೆರೆ ಬೀಳಲಿದೆ.
ತ್ರಿಶಕ್ತಿಸ್ವರೂಪಿಣಿ ಶ್ರೀ ಕಾಳಿಕಾಂಬ ಪರಮೇಶ್ವರಿಗೆ ವಿಶೇಷ ಪೂಜೆ
ಶಿಲ್ಪಕುಲದ ಆರಾಧ್ಯ ದೇವತೆಯಾಗಿರುವ ಶ್ರೀ ಕಾಳಿಕಾಂಬ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನಾಡಿನ ಸುಭಿಕ್ಷೆ, ಭಕ್ತರ ಸಕಲ ಮನೋಕಾಮನೆಗಳ ಈಡೇರಿಕೆ ಹಾಗೂ ಲೋಕಕಲ್ಯಾಣಕ್ಕಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದೇವಸ್ಥಾನದಲ್ಲಿ ಶ್ರೀ ಕಮಠೇಶ್ವರ ಸ್ವಾಮಿ, ಸಂಕಷ್ಟಹರ ಗಣಪತಿ, ಸುಬ್ರಹ್ಮಣ್ಯ ಸ್ವಾಮಿ, ಆಂಜನೇಯ, ವೆಂಕಟೇಶ್ವರ, ವೀರಬ್ರಹ್ಮೇಂದ್ರ ಗುರುಗಳು ಹಾಗೂ ನವಗ್ರಹ ದೇವರುಗಳ ಸನ್ನಿಧಿಯೂ ಇದೆ. ಭಕ್ತರಿಗೆ ಕುಂಕುಮಾರ್ಚನೆ, ಪುಷ್ಪಪೂಜೆ, ರಂಗಪೂಜೆ, ದುರ್ಗಾ ನಮಸ್ಕಾರ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ.
ದಿನವಾರು ಪೂಜಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
ಅಕ್ಟೋಬರ್ 11, ಭಾನುವಾರ – ಶೈಲಪುತ್ರಿ ಅಲಂಕಾರ
- ಬೆಳಗ್ಗೆ 5ರಿಂದ 6ರವರೆಗೆ ಅಭಿಷೇಕ.
- ಬೆಳಗ್ಗೆ 8ರಿಂದ ಗಣಪತಿ ಪೂಜೆ, ಪುಣ್ಯಾಹವಾಚನ, ನವಗ್ರಹಾರಾಧನೆ, ಕಲಶಸ್ಥಾಪನೆ ಹಾಗೂ ಮಹಾಗಣಪತಿ ಹೋಮ.
- ಸಂಜೆ 5.15ರಿಂದ 6.15ರವರೆಗೆ ಸ್ಫೂರ್ತಿ ಕಲಾ ಸಮಾಜದಿಂದ ಭಜನೆ.
- ಸಂಜೆ 6.15ರಿಂದ 7.15ರವರೆಗೆ ನೃತ್ಯ ಲಹರಿ ತಂಡದಿಂದ ಭರತನಾಟ್ಯ.
- ರಾತ್ರಿ 7.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ಅಕ್ಟೋಬರ್ 12, ಸೋಮವಾರ – ಬ್ರಹ್ಮಚಾರಿಣಿ ಅಲಂಕಾರ
- ಬೆಳಗ್ಗೆ 8ರಿಂದ 10ರವರೆಗೆ ಶ್ರೀ ರುದ್ರ ಹೋಮ.
- ಸಂಜೆ 5.15ರಿಂದ 6.15ರವರೆಗೆ ಶ್ರೀ ಪ್ರಕೃತಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ.
- ಸಂಜೆ 6ರಿಂದ 7ರವರೆಗೆ ದುರ್ಗಾದೀಪ ನಮಸ್ಕಾರ ಪೂಜೆ.
- ಸಂಜೆ 6.15ರಿಂದ 7.15ರವರೆಗೆ ಶ್ರೀ ಶೈಲವಲ್ಲಭ ಭಜನಾ ಮಂಡಳಿಯಿಂದ ಭಜನೆ.
- ರಾತ್ರಿ 7.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ಅಕ್ಟೋಬರ್ 13, ಮಂಗಳವಾರ – ಚಂದ್ರಘಂಟಾ ಅಲಂಕಾರ
- ಬೆಳಗ್ಗೆ 8ರಿಂದ 10ರವರೆಗೆ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ.
- ಸಂಜೆ 5ರಿಂದ 6ರವರೆಗೆ ಶ್ರೀ ಹರಿ ಭಜನಾ ಮಂಡಳಿಯಿಂದ ಭಜನೆ.
- ಸಂಜೆ 6ರಿಂದ 7.30ರವರೆಗೆ ಗಾಯತ್ರಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ.
- ಸಂಜೆ 7ಕ್ಕೆ ರಂಗಪೂಜೆ.
- ರಾತ್ರಿ 7.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ಅಕ್ಟೋಬರ್ 14, ಬುಧವಾರ – ವೈಷ್ಣವಿ ಅಲಂಕಾರ
- ಬೆಳಗ್ಗೆ 8ರಿಂದ 10ರವರೆಗೆ ಸುಬ್ರಹ್ಮಣ್ಯ ಹೋಮ.
- ಸಂಜೆ 5.15ರಿಂದ 6.15ರವರೆಗೆ ಶ್ರೀ ಭೂದುರ್ಗಾ ಭಜನಾ ಮಂಡಳಿಯಿಂದ ಭಜನೆ.
- ಸಂಜೆ 6.15ರಿಂದ 7.15ರವರೆಗೆ ಶ್ರೀ ಬೆನಕ ಕಲಾ ಸೌರಭ ತಂಡದಿಂದ ಭಜನಾ ಕಾರ್ಯಕ್ರಮ.
- ರಾತ್ರಿ 7.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ಅಕ್ಟೋಬರ್ 15, ಗುರುವಾರ – ಸ್ಕಂದಮಾತಾ ಅಲಂಕಾರ
- ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಚಂಡಿಕಾ ಹೋಮ.
- ಅರೇಮಾದನಹಳ್ಳಿಯ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಪರಮಪೂಜ್ಯ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ.
- ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
- ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ.
- ಸಂಜೆ 5.15ರಿಂದ 6.15ರವರೆಗೆ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯಿಂದ ಭಜನೆ.
- ಸಂಜೆ 6.15ರಿಂದ 7.15ರವರೆಗೆ ಶ್ರೀ ನಾಚಾರಮ್ಮ ಸಂಕೇತಿ ಮಹಿಳಾ ಸಂಘದಿಂದ ಭಜನೆ.
ಅಕ್ಟೋಬರ್ 16, ಶುಕ್ರವಾರ – ಸರಸ್ವತಿ ಅಲಂಕಾರ
- ಬೆಳಗ್ಗೆ 8ರಿಂದ 10ರವರೆಗೆ ಶ್ರೀ ಸರಸ್ವತಿ ಹೋಮ.
- ಸಂಜೆ 5.15ರಿಂದ 6.15ರವರೆಗೆ ಶ್ರೀ ಶಂಕರ ಭಜನಾ ಮಂಡಳಿಯಿಂದ ಭಜನೆ.
- ಸಂಜೆ 6.30ರಿಂದ 7.30ರವರೆಗೆ ಎನ್. ವರ್ಷ ಮತ್ತು ತಂಡದಿಂದ ಭರತನಾಟ್ಯ.
- ಸಂಜೆ 7ಕ್ಕೆ ರಂಗಪೂಜೆ; ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ಅಕ್ಟೋಬರ್ 17, ಶನಿವಾರ – ಕಾಳರಾತ್ರಿ ಅಲಂಕಾರ
- ಬೆಳಗ್ಗೆ 8ರಿಂದ 10ರವರೆಗೆ ಶ್ರೀ ಗಾಯತ್ರಿ ಹೋಮ.
- ಸಂಜೆ 5.15ರಿಂದ 6.15ರವರೆಗೆ ಶ್ರೀ ಕೃಪಾ ಭಜನಾ ಮಂಡಳಿಯಿಂದ ಭಜನೆ.
- ಸಂಜೆ 6.30ರಿಂದ 7.30ರವರೆಗೆ ಶ್ರೀ ನರೇಂದ್ರ ಮತ್ತು ತಂಡದಿಂದ ವೀಣಾವಾದನ.
- ಸಂಜೆ 7.30ರಿಂದ 8ರವರೆಗೆ ಮಕ್ಕಳಿಂದ ಭರತನಾಟ್ಯ.
- ಬಳಿಕ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ಅಕ್ಟೋಬರ್ 18, ಭಾನುವಾರ – ದುರ್ಗಾ ಅಲಂಕಾರ
- ಬೆಳಗ್ಗೆ 8ರಿಂದ 10ರವರೆಗೆ ಶ್ರೀ ದುರ್ಗಾ ಹೋಮ.
- ಸಂಜೆ 5.15ರಿಂದ 6.15ರವರೆಗೆ ಶ್ರೀ ವೈಭವಲಕ್ಷ್ಮೀ ಮಕ್ಕಳ ಕುಣಿತ ಭಜನಾ ತಂಡದಿಂದ ಕಾರ್ಯಕ್ರಮ.
- ಸಂಜೆ 6.15ರಿಂದ 7.15ರವರೆಗೆ ಸುರಭಿ ಭಜನಾ ವೃಂದದಿಂದ ಭಜನೆ.
- ಸಂಜೆ 7.30ರಿಂದ 8.30ರವರೆಗೆ ಕು. ಪ್ರತೀಕ್ಷಾ ಶ್ರೀಧರ್ ಅವರಿಂದ ಭಕ್ತಿಗಾನ ಸುಧೆ.
- ಬಳಿಕ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ಅಕ್ಟೋಬರ್ 19, ಸೋಮವಾರ – ಮಹಾಗೌರಿ ಅಲಂಕಾರ
- ಬೆಳಗ್ಗೆ 6ರಿಂದ 10ರವರೆಗೆ ಶ್ರೀ ವಿದ್ಯಾ-ಮೇಧಾ ಹೋಮ.
- ಸಂಜೆ 5.15ರಿಂದ 6.15ರವರೆಗೆ ಶ್ರೀ ಶಿವಪಾರ್ವತಿ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿಯಿಂದ ಭಜನೆ.
- ಸಂಜೆ 6.15ರಿಂದ 7.15ರವರೆಗೆ ಶ್ರೀ ಛಾಯಾಪುತ್ರ ಭಜನಾ ಮಂಡಳಿಯಿಂದ ಭಜನೆ.
- ಸಂಜೆ 7ಕ್ಕೆ ರಂಗಪೂಜೆ.
- ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ಅಕ್ಟೋಬರ್ 20, ಮಂಗಳವಾರ – ಸಿದ್ಧಿದಾತ್ರಿ ಅಲಂಕಾರ
- ಬೆಳಗ್ಗೆ 6ರಿಂದ 10ರವರೆಗೆ ಶ್ರೀ ಲಲಿತಾ ಹೋಮ.
- ಸಂಜೆ 5.15ರಿಂದ 6.15ರವರೆಗೆ ಸುನಿಧಿ ವೃಂದದಿಂದ ಭಜನೆ.
- ಸಂಜೆ 6.15ರಿಂದ 7.15ರವರೆಗೆ ಶ್ರೀ ಮಂಜುಳ ಗಜಾನನ ಸತ್ಸಂಗ ಮಂಡಳಿಯಿಂದ ಭಜನೆ.
- ಸಂಜೆ 7ಕ್ಕೆ ದುರ್ಗಾ ನಮಸ್ಕಾರ ಪೂಜೆ.
- ರಾತ್ರಿ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ಅಕ್ಟೋಬರ್ 21, ಬುಧವಾರ – ವಿಜಯದಶಮಿ
- ಬೆಳಗ್ಗೆ 6ರಿಂದ 10ರವರೆಗೆ ಶ್ರೀ ಸೂಕ್ತ ಹೋಮ.
- ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಕಿರಿಯ ಯತಿವರ್ಯರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ.
- ಪಲ್ಲಕ್ಕಿ ಉತ್ಸವ, ಶಮಿ ಪೂಜೆ ಹಾಗೂ ಉಯ್ಯಾಲೋತ್ಸವ ಸೇವೆ.
- ಸಂಜೆ 5.15ರಿಂದ 6.15ರವರೆಗೆ ಶ್ರೀ ಗೀತಾ ಸತ್ಸಂಗದಿಂದ ಕಾರ್ಯಕ್ರಮ.
- ಸಂಜೆ 6.15ರಿಂದ 7.15ರವರೆಗೆ ಶ್ರೀ ಶಾರದಾ ಕಲಾ ಸಂಘದಿಂದ ಕಾರ್ಯಕ್ರಮ.
-
ಸಂಜೆ 7ಕ್ಕೆ ರಂಗಪೂಜೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ನವರಾತ್ರಿ ಪೂಜಾ ಸಮಾಪ್ತಿ ಹಾಗೂ ಪ್ರಸಾದ ವಿನಿಯೋಗ.
ಪ್ರತಿದಿನ ಪಾರಾಯಣ ಮತ್ತು ಭರತನಾಟ್ಯ ಸೇವೆ
ನವರಾತ್ರಿ ಮಹೋತ್ಸವದ ಪ್ರತಿದಿನ ದುರ್ಗಾ ಸಪ್ತಶತಿ ಪಾರಾಯಣ ನಡೆಯಲಿದೆ. ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳಿಯಿಂದ ಲಲಿತಾ ಸಹಸ್ರನಾಮ ಹಾಗೂ ಕಾಳಿಕಾ ಸಹಸ್ರನಾಮ ಪಾರಾಯಣ ಆಯೋಜಿಸಲಾಗಿದೆ.
ವಿದುಷಿ ಭಾನು ಚಿದಾನಂದ ಅವರ ‘ಮೇದಿನಿ ನೃತ್ಯ ನಿಕೇತನ’ದ ವಿದ್ಯಾರ್ಥಿಗಳಾದ ಅಪೂರ್ವ ಎಂ.ಬಿ., ಅಂಶು ಕಾಪ್ಸೆ, ಧೃತಿ ಎಸ್. ರಾವ್, ವಿಸ್ಮಿತಾ, ಆರಾಧ್ಯ ಮಯ್ಯ, ಏಕಾಧ್ಯ, ವೈಷ್ಣವಿ, ತನುಶ್ರೀ ಹಾಗೂ ಶ್ರೀಜಾ ಅವರು ಪ್ರತಿದಿನ ಸಂಜೆ ಅಮ್ಮನವರ ಸನ್ನಿಧಿಯಲ್ಲಿ ಭರತನಾಟ್ಯ ಸೇವೆ ಸಲ್ಲಿಸಲಿದ್ದಾರೆ.
ಜಿಲ್ಲೆಯ ವಿವಿಧ ವಿಶ್ವಕರ್ಮ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಹಾಸನ ತಾಲ್ಲೂಕು ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಆನಂದ್ ಮನವಿ ಮಾಡಿದ್ದಾರೆ.
ಸ್ಥಳ: ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಸ್ಥಾನ, ಗಾಂಧಿಬಜಾರ್, ಹಾಸನ
ದಿನಾಂಕ: ಅಕ್ಟೋಬರ್ 11ರಿಂದ 21ರವರೆಗೆ, 2026
ವಿಶೇಷ: ಅಕ್ಟೋಬರ್ 21ರಂದು ವಿಜಯದಶಮಿ, ಪಲ್ಲಕ್ಕಿ ಉತ್ಸವ ಮತ್ತು ಶಮಿ ಪೂಜೆ












