ಹಾಸನ: ರೇವಣ್ಣ ಚಿಲ್ಲರೆ ಗಿರಾಕಿಗಳಂಗೆ ಪೊಳ್ಳು ಮಾತಾಡುತ್ತಿದ್ದಾರೆ: ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಟಾಂಗ್

ಹಾಸನ: ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕಾಗಿ ವಿವಿಧ ಇಲಾಖೆಯಿಂದ ನಾಲ್ಕು ಕೋಟಿ ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಆರೋಪಕ್ಕೆ ಮಾಜಿ ಎಂಎಲ್‌ಸಿ ಎಂ.ಎ. ಗೋಪಾಲಸ್ವಾಮಿ ಟಾಂಗ್ ನೀಡಿದ್ದಾರೆ..

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಸ್ವಾಮಿ, “ಟೀಕೆ ಮಾಡುವ ಮೊದಲು ಸಾಕ್ಷಿ ಹೇಳಬೇಕು. ಎಲ್ಲಿ ವಸೂಲಿ ಮಾಡಿದ್ದಾರೆ? ಮೈತ್ರಿ ಸರ್ಕಾರದಲ್ಲಿ ನಾನು ಇದ್ದೆ. ಆಗ ಹಾಸನದಲ್ಲಿ ಕಾರ್ಯಕ್ರಮ ನಡೆದಾಗ ಇವರೇನಾದರೂ ವಸೂಲಿ ಮಾಡಿದ್ದರಾ?” ಎಂದು ಪ್ರಶ್ನಿಸಿದರು.

“ರೇವಣ್ಣರವರು ತಮ್ಮ ಮನೆ ಬಾಗಿಲಲ್ಲಿ ಪ್ರಧಾನಿ, ಮುಖ್ಯಮಂತ್ರಿ ಕಾರ್ಯಕ್ರಮ ನಡೆಸಿದವರು. ಸರ್ಕಾರಿ ಕಾರ್ಯಕ್ರಮ ಎಂದರೆ ಅವರಿಗೆ ಹೊಸದಲ್ಲ. ಈಗ ಹಠಾತ್ತನೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ,” ಎಂದು ವ್ಯಂಗ್ಯವಾಡಿದರು.

“ಇವರು ಚಿಲ್ಲರೆ ಗಿರಾಕಿಗಳಂತೆ ಪೊಳ್ಳು ಮಾತು ಮಾತನಾಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯಬಾರದರು. ನಾಲ್ಕೈದು ಕೋಟಿ ರೂ. ಎಂದರೆ ಬೆಲೆಯೇ ಇಲ್ಲವಾ? ಯಾರಾದರೂ ಹಣ ವಸೂಲಿ ಮಾಡದಿದ್ದರೆ, ಆ ಆರೋಪದ ಆಧಾರವೇನು?” ಎಂದು ಗೋಪಾಲಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.