ಹಾಸನ: ಭೂಮಿ ಲೂಟಿ ತಡೆಯದಿದ್ದರೆ ಉಗ್ರ ಹೋರಾಟ: ಕಂದಾಯ ಇಲಾಖೆ ಅಧಿಕಾರಿಗಳಿಗೆ ರೇವಣ್ಣ ಎಚ್ಚರಿಕೆ

ಹಾಸನ: ನಗರದ ಸುತ್ತಮುತ್ತ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಕಬಳಿಸಲು ಕೆಲವರು ಸಂಚು ರೂಪಿಸಿದ್ದು ಅದನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಸಿದರು.

ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಅಧಿಕಾರಿಗಳಿಗೆ ಒಂದು ಎಚ್ಚರಿಕೆ ಮಾತನ್ನು ಹೇಳುತ್ತಿದ್ದೇನೆ ಅವರು ಈಗಾಗಲೇ ರೈತರು ನೀಡಿರುವ ದೂರು ಆದರಿಸಿ ತನಿಖೆ ನಡೆಸಿ ಆಕ್ರಮವಾಗಿ ಭೂಮಿಕಾಳಿಸಲು ಮುಂದಾಗಿರುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಭೂಮಿ ಕಬಳಿಕೆಗೆ ಅವಕಾಶ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು