10.4 C
Munich
Home News ಅರಕಲಗೂಡು:ದಸರಾ ಉದ್ಘಾಟನೆಗೆ ಬೂಕರ್ ಪುರಸ್ಕೃತೆ ದೀಪಾ ಬಸ್ತಿಗೆ ಆಹ್ವಾನ: ಎ.ಮಂಜು

ಅರಕಲಗೂಡು:ದಸರಾ ಉದ್ಘಾಟನೆಗೆ ಬೂಕರ್ ಪುರಸ್ಕೃತೆ ದೀಪಾ ಬಸ್ತಿಗೆ ಆಹ್ವಾನ: ಎ.ಮಂಜು

Hassan district Arakalgudu Dasara festival – 2025 will be held on a grand scale on October 2, and International Booker Prize winner Deepa Basti has been invited for the inauguration, said MLA A. Manju.

ಅರಕಲಗೂಡು: ಅರಕಲಗೂಡು ದಸರಾ ಉತ್ಸವ – 2025 ಅಕ್ಟೋಬರ್ 2ರಂದು ಅದ್ಧೂರಿಯಾಗಿ ಜರುಗಲಿದ್ದು, ಉದ್ಘಾಟನೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ದೀಪಾ ಬಸ್ತಿ ಅವರನ್ನು ಆಹ್ವಾನಿಸಲಾಗಿದೆ ಎಂದು ಮಾಜಿ ಸಚಿವ, ಶಾಸಕ ಎ. ಮಂಜು ತಿಳಿಸಿದ್ದಾರೆ.

ಸಂಜೆ 4 ಗಂಟೆಗೆ ಶ್ರೀ ದೊಡ್ಡಮ್ಮ ದೇವಸ್ಥಾನ ಆವರಣದಿಂದ ಬನ್ನಿಮಂಟಪದವರೆಗೂ ಮೆರವಣಿಗೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಸಂತೆಮರೂರು ರಸ್ತೆಯ ಬನ್ನಿಮಂಟಪದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ.

ಮೈಸೂರು ದಸರಾ ಉದ್ಘಾಟನೆಗೆ ದೀಪಾ ಬಸ್ತಿ ಅವರಿಗೆ ಆಹ್ವಾನ ನೀಡದ ಹಿನ್ನೆಲೆಯಲ್ಲಿ ಅರಕಲಗೂಡು ದಸರಾ ಉದ್ಘಾಟನೆಗೆ ಅವರನ್ನು ಆಹ್ವಾನಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಾಸಕ ಎ.ಮಂಜು ಹೇಳಿದರು. “ಸರ್ಕಾರ ಇಬ್ಬರನ್ನು ಸಮನಾಗಿ ಕಾಣಬೇಕಿತ್ತು. ದೀಪಾ ಬಸ್ತಿ ಅವರು ಅನುವಾದ ಮಾಡಿದ್ದಕ್ಕಾಗಿ ಭಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ದೊರೆತಿದೆ. ಆದ್ದರಿಂದ ಅರಕಲಗೂಡು ದಸರಾ ಉದ್ಘಾಟನೆಗೆ ಅವರನ್ನು ಆಹ್ವಾನಿಸಲಾಗಿದೆ” ಎಂದು ಅವರು ಸ್ಪಷ್ಟಪಡಿಸಿದರು.

error: Content is protected !!