11.1 C
Munich
Home News ಹಾಸನ: ಆಟೋ ಚಾಲಕನ ಅದ್ಭುತ ಸಾಧನೆ

ಹಾಸನ: ಆಟೋ ಚಾಲಕನ ಅದ್ಭುತ ಸಾಧನೆ

Girish, who works as a Bharat Gas delivery man in the city, has achieved outstanding achievements in his own profession.

ಹಾಸನ: ನಗರದ ಭಾರತ ಗ್ಯಾಸ್ ಡೆಲಿವರಿ ಮ್ಯಾನ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಅವರು ತಮ್ಮದೇ ಆದ ವೃತ್ತಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಸಾಮಾನ್ಯವಾಗಿ 650 ಕೆ.ಜಿ. ತೂಕ ಸಾಗಿಸುವ ಸಾಮರ್ಥ್ಯವಿರುವ ಗೂಡ್ಸ್ ಎಲೆಕ್ಟ್ರಿಕ್ ಆಪೆ ಆಟೋದಲ್ಲಿ, ಅವರು ತ್ರಿಗುಣ ವಾದ 1785 ಕೆ.ಜಿ. ತೂಕವನ್ನು ಯಶಸ್ವಿಯಾಗಿ ಸಾಗಿಸಿದ್ದಾರೆ.

ಇದೇ ಅಲ್ಲದೆ, ಈ ಸಾಧನೆಗೆ ವರ್ಷ ಹಾಗೂ ಸಮಯವೂ ಗಮನಾರ್ಹವಾಗಿದೆ. 9-9-2025ರಂದು ರಾತ್ರಿ 9 ಗಂಟೆ 9 ನಿಮಿಷ 9 ಸೆಕೆಂಡಿಗೆ, ಹಾಸನದ ಡೈರಿ ಸರ್ಕಲ್‌ನಿಂದ ತಣ್ಣೀರು ಹಳ್ಳದವರೆಗೆ 1785 ಕೆ.ಜಿ. ತೂಕವನ್ನು ಸುರಕ್ಷಿತವಾಗಿ ಸಾಗಿಸುವಲ್ಲಿ ಗಿರೀಶ್ ಯಶಸ್ವಿಯಾದರು. ಸಂಖ್ಯಾಶಾಸ್ತ್ರದ ದೃಷ್ಟಿಯಿಂದಲೂ ಈ ದಿನಾಂಕ, ಸಮಯ, ಹಾಗೂ ವರ್ಷದ ಮೊತ್ತ 9ಕ್ಕೆ ಹೊಂದಿಕೆಯಾಗಿರುವುದು ವಿಶೇಷ ಕುತೂಹಲ ಕೆರಳಿಸಿದೆ.

ಈ ಪ್ರಯತ್ನದಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಗಳ ಸಹಕಾರ, ಜೊತೆಗೆ ಕುಟುಂಬ ಹಾಗೂ ಸ್ನೇಹಿತರ ಪ್ರೋತ್ಸಾಹ ಗಿರೀಶ್ ಅವರ ಹಿಂದೆ ನಿಂತಿತ್ತು. ಗಿರೀಶ್ ಅವರ ಮಾತಿನಲ್ಲಿ, “ಇದು ನನ್ನ ಬದುಕಿನಲ್ಲೇ ಒಂದು ಮರೆಯದ ಕ್ಷಣ. ಆಟೋ ಚಲಾವಣೆಯಲ್ಲಿ ಶ್ರಮವಿದ್ದರೂ, ಧೈರ್ಯದಿಂದ ಹಾಗೂ ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು” ಎಂದರು.

ಇದೇ ರೀತಿಯ ಸಂಖ್ಯಾತ್ಮಕ ಸಂಯೋಗ (9-9-9) ಮತ್ತೆ ಬರಲು 2034ನೇ ಇಸವಿಯವರೆಗೆ ಕಾಯಬೇಕಾಗಿದೆ. ಆದ್ದರಿಂದ ಈ ವರ್ಷದ ಗಿರೀಶ್ ಅವರ ಸಾಧನೆ ಅದ್ಭುತ ಕ್ಷಣವಾಗಿ ಇತಿಹಾಸದಲ್ಲಿ ಉಳಿಯಲಿದೆ.

error: Content is protected !!