ಹಾಸನ: ಹುಣಸಿನಕೆರೆ ಕೋಡಿಯಲ್ಲಿ ಇಸ್ಪೀಟ್ ಅಡ್ಡೆ: ಕ್ರೈಂಬ್ರಾಂಚ್ ಇನ್ಸ್ ಪೆಕ್ಟರ್ ವಿನಯ್ ನೇತೃತ್ವದಲ್ಲಿ ದಾಳಿ ₹19 ಲಕ್ಷ ವಶ!- ಎದ್ದುಬಿದ್ದು ಓಡಿದರೂ 11 ಜೂಜುಕೋರರು ಅಂದರ್

Hassan: DCRB police raided Ispeet Adde in Hunasinakere Kodi in the city's Pension Mohalla and arrested eleven people who were gambling.

ಹಾಸನ: ನಗರದ ಪೆನ್‌ಷನ್‌ಮೊಹಲ್ಲಾದ ಹುಣಸಿನಕೆರೆ ಕೋಡಿಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಡಿಸಿಆರ್‌ಬಿ ಪೊಲೀಸರು ದಾಳಿ ನಡೆಸಿ, ಜೂಜಾಡುತ್ತಿದ್ದ ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ.

ನಿನ್ನೆ ರಾತ್ರಿ ನಡೆದ ಈ ದಾಳಿಯಲ್ಲಿ ಜೂಜಾಟಕ್ಕೆ ಪಣಕ್ಕಿಟ್ಟಿದ್ದ ₹19,99,680 ನಗದು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ಕೆಲವರು ಹಣದ ಸಮೇತ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತರು: ತಮ್ಮಯ್ಯ, ಜಿತೇಂದ್ರ, ಜಲೇಂದ್ರ, ವಿಜಯಕುಮಾರ, ಶಾಂತಪ್ಪ, ಶಶಿಕುಮಾರ, ಅಶೋಕ, ಸರ್ವರ್‌ಖಾನ್, ಸುಮನ್, ಕುಮಾರ್.

ಡಿಸಿಆರ್‌ಬಿ ಇನ್ಸ್‌ಪೆಕ್ಟರ್ ವಿನಯ್‌ಕುಮಾರ್ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.