14.2 C
Munich
Home News Politics ಹಾಸನ: ಗೊರೂರಿನಲ್ಲಿ ಬೃಂದಾವನ ಮಾದರಿ ಉದ್ಯಾನವನ ನಿರ್ಮಾಣಕ್ಕೆ ಪ್ರಯತ್ನ: ಸಿಎಂ ಭರವಸೆ: ಬಹು ವರ್ಷಗಳ ಕನಸಿಗೆ...

ಹಾಸನ: ಗೊರೂರಿನಲ್ಲಿ ಬೃಂದಾವನ ಮಾದರಿ ಉದ್ಯಾನವನ ನಿರ್ಮಾಣಕ್ಕೆ ಪ್ರಯತ್ನ: ಸಿಎಂ ಭರವಸೆ: ಬಹು ವರ್ಷಗಳ ಕನಸಿಗೆ ರೆಕ್ಕೆ

Hassan: CM Siddaramaiah has responded to the long-standing demand of the KRS to build a Brindavan model park on about 530-700 acres of vacant land at the base of the Hemavati reservoir dam in Gorur in the taluk.

ಹಾಸನ: ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯದ ಅಣೆಕಟ್ಟೆ ತಳಭಾಗದ ಸುಮಾರು ೫೩೦-೭೦೦ ಎಕರೆ ಖಾಲಿ ಜಾಗದಲ್ಲಿ ಕೆಆರ್‌ಎಸ್‌ನ ಬೃಂದಾವನ ಮಾದರಿ ಉದ್ಯಾನವನ ನಿರ್ಮಿಸಬೇಕೆಂಬಬಹು ವರ್ಷಗಳ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.

ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿಂದು ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಿಎಂ, ಈ ಬಗ್ಗೆ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಗಮನಕ್ಕೆ ತಂದಿದ್ದಾರೆ. ೭೦೦ ಎಕರೆ ಖಾಲಿ ಜಾಗ ಇದೆ ಎಂದಿದ್ದಾರೆ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ ಯೋಜನೆ ಜಾರಿ ಮಾಡುವ ಭರವಸೆ ನೀಡಿದರು.

ಹೇಳಿ ಕೇಳಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಐತಿಹಾಸಿಕ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ತಾಣಗಳಿದ್ದು, ಗೊರೂರಿನಲ್ಲಿ ಆಕರ್ಷಕ ಪಾರ್ಕ್ ನಿರ್ಮಾಣ ಆದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಜನರಿಗೆ ಅನುಕೂಲ ಆಗಲಿದೆ. ಹಾಗಾಗಿ, ಅದನ್ನು ಸಾಕಾರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಾನು ಮಾತು ಕೊಡಲ್ಲ, ಕೊಟ್ಟ ಮೇಲೆ ಮಾಡುವೆ ಎಂದು ನುಡಿದರು.

ಇಂದು ಜಿಲ್ಲೆಯಲ್ಲಿ ೧೩೨ ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ, ೧೬೬ ಕೋಟಿ ವೆಚ್ಚದ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ನೂರಾರು ಕೋಟಿಯ ಸವಲತ್ತುಗಳನ್ನು ರೈತರು, ಮಹಿಳೆಯರಿಗೆ ಬಡವರಿಗೆ, ಸಮಾಜದ ದುರ್ಬಲ ವರ್ಗದವರಿಗೆ ಹಂಚುವ ಕೆಲಸ ಆಗುತ್ತಿದೆ ಎಂದರು.

ಹಾಸನ ನಮ್ಮ ಪಕ್ಕದ ಜಿಲ್ಲೆ ಇಲ್ಲಿನ ರಾಜಕೀಯವೂ ಗೊತ್ತಿದೆ, ಸಮಸ್ಯೆಯೂ ತಿಳಿದಿದೆ. ಅನೇಕ ಸಮಸ್ಯೆ ಪರಿಹರಿಸುವ ಕೆಲಸ ಮಾಡಿದ್ದೇವೆ. ೨೦೨೩ ರಲ್ಲಿ ನಾವು ನೀಡಿದ್ದ ೪೯೨ ಭರವಸೆಗಳಲ್ಲಿ ೨.೬ ವರ್ಷಗಳಲ್ಲಿ ೨೪೨ನ್ನು ಈಡೇರಿಸಿದ್ದೇವೆ. ೨೦೧೩-೧೮ ರಲ್ಲಿ ನೀಡಿದ್ದ ೧೬೫ ಭರವಸೆಗಳಲ್ಲಿ ೧೫೮ನ್ನು ಈಡೇರಿಸಿದ್ದೇವೆ. ಅಧಿಕಾರಕ್ಕೆ ಬರುವ ಮುನ್ನ ೫ ಗ್ಯಾರಂಟಿ ಭರವಸೆ ನೀಡಿದ್ದೆವು, ಎಲ್ಲವರನ್ನೂ ಈಡೇರಿಸಿದ್ದೇವೆ. ಇತಿಹಾಸದಲ್ಲಿ ಕೊಟ್ಟ ಮಾತಿನಂತೆ ನಡೆದಿದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.

ಹಿಂದೆ ಗ್ಯಾರಂಟಿ ಜಾರಿ ಸಾಧ್ಯವಿಲ್ಲ ಎಂದ್ರು, ನಾವು ಮಾಡಲಿಲ್ವಾ, ಟೀಕೆಗಳು ಸಾಯುತ್ತವೆ, ಮಾಡಿದ ಕೆಲಸ ಉಳಿಯುತ್ತವೆ ಎಂದು ಡಿ.ಕೆ ಆಗಾಗ ಹೇಳುತ್ತಾರೆ ಎಂದು ಅವರತ್ತ ಕೈ ತೋರಿಸಿ ನಗುತ್ತಲೇ ಹೇಳಿದರು.

ಇಂದು ಡಾ.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ. ನಾವೆಲ್ಲರೂ ಅವರ ಸ್ಮರಣೆ ಮಾಡಬೇಕಿದೆ. ಅವರು ಬರೆದ ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ದೇಶದಲ್ಲಿ ಸ್ಥಾಪನೆ ಮಾಡಬೇಕೆಂದರು. ಜಾತಿ ತೊಲಗಿಸಿ ಸಮ ಸಮಾಜ ನಿರ್ಮಾಣ ಆಗಬೇಕು ಎಂದು ಆಶಿಸಿದರು. ಕೇವಲ ರಾಜಕೀಯ ಸ್ವಾತಂತ್ರ್ಯ ಸಾಲದು, ಎಲ್ಲ ರೀತಿಯಲ್ಲೂ ಸ್ವಾತಂತ್ರ್ಯ ಸಿಕ್ಕರೆ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರಲಿದೆ, ಸಾರ್ಥಕ ಆಗಲಿದೆ ಎಂದು ಸಿಎಂ ನುಡಿದರು.

ನಾವೆಲ್ಲರೂ ಬಾಬಾ ಸಾಹೇಬರ ನೆನೆಯೋಣ. ಜಾತಿಯತೆ, ವರ್ಗ ಭಿನ್ನತೆ ಅಳಿಸಲು ಪ್ರಯತ್ನ ಮಾಡೋಣ ಎಂದರು.
ಅದೇ ಆಶಯದಲ್ಲಿ ಜಾತಿ, ಧರ್ಮ ಹೊರತಾಗಿ, ಸಮಾಜದಲ್ಲಿ ಸಮಾನತೆ ಬಂದು ಅಸಮಾನತೆ ಹೋಗಬೇಕೆಂದು ಗ್ಯಾರಂಟಿ ಜಾರಿ ಮಾಡಲಾಗಿದೆ ಎಂದ ಸಿಎಂ, ಜಾತಿ ಕಾರಣದಿಂದ ಸಮಾಜದಲ್ಲಿ ಇನ್ನೂ ಸಮಾನತೆ ಬಂದಿಲ್ಲ ಎಂದು ಬೇಸರ ಹೊರ ಹಾಕಿದರು.

ಅಸಮಾನತೆ ತೊಡೆದು ಹಾಕಲೆಂದೇ ಹಿಂದೆ ಹಲವು ಭಾಗ್ಯಗಳನ್ನು ಜಾರಿ ಮಾಡಿದ್ದೆವು, ಈಗ ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ಆದರೂ ಇಂಥ ಕಾರ್ಯಕ್ರಮ ಬೇಡ ಅನ್ನುವವರಿಗೆ, ವ್ಯರ್ಥ ಅನ್ನುವವರಿಗೆ ಜನರೇ ಉತ್ತರ ಕೊಡಬೇಕು ಎಂದು ಕರೆ ನೀಡಿದರು.

ನಮ್ಮ ಸರ್ಕಾರ ಯಾವತ್ತೂ ಕೂಡ ಸಂವಿಧಾನಪರ, ಬಡವರು, ರೈತರು, ದಲಿತರು, ಅಲ್ಪಸಂಖ್ಯಾತರು, ಕಾರ್ಮಿಕರ ಪರವಾದ ಸರ್ಕಾರ. ಮುಂದೆಯೂ ಈ ರೀತಿಯ ಶಂಕುಸ್ಥಾಪನೆ, ಉದ್ಘಾಟನೆ ಹಾಸನದಲ್ಲಿ ಮುಂದುವರಿಯಲಿವೆ. ಹಾಸನಕ್ಕೆ ವಿಶೇಷ ಗಮನ ಕೊಡುತ್ತೇವೆ.
-ಸಿದ್ದರಾಮಯ್ಯ, ಸಿಎಂ

Hassan: CM Siddaramaiah has responded to the long-standing demand of the KRS to build a Brindavan model park on about 530-700 acres of vacant land at the base of the Hemavati reservoir dam in Gorur in the taluk.

error: Content is protected !!