2.4 C
Munich
Home News ಹಾಸನ: ವಿದೇಶಕ್ಕೆ ಮತ್ತೊಂದು ಮಗು ದತ್ತು

ಹಾಸನ: ವಿದೇಶಕ್ಕೆ ಮತ್ತೊಂದು ಮಗು ದತ್ತು

ಹಾಸನ: ನಗರದ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮತ್ತೊಂದು ಮಾನವೀಯ ಸನ್ನಿವೇಶ ನಡೆಯಿತು. ಸಂಸ್ಥೆಯ ಆಶ್ರಯದಲ್ಲಿದ್ದ ವಿಶೇಷ ಅಗತ್ಯತೆಯ ಗಂಡು
ಮಗುವನ್ನು ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಪ್ರಜೆಗಳಾದ ಕೆನೆತ್ ಡೇವಿಡ್ ಕಿರ್ಬಿ ಮತ್ತು ಬೆಥನಿ ರಚೆಲ್ಲಿ ಕಿರ್ಬೆ ದಂಪತಿ ಕಾನೂನಿನ ಪ್ರಕಾರ ದತ್ತು ಪಡೆದುಕೊಂಡಿದ್ದಾರೆ.

ಇದರೊಂದಿಗೆ ತವರು ಸಂಸ್ಥೆಯಿAದ ಈಗಾಗಲೇ ದತ್ತು ಪಡೆದ ಮಕ್ಕಳ ಸಂಖ್ಯೆ ೨೧೪ಕ್ಕೆ ತಲುಪಿದೆ.
ಈ ವೇಳೆ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಡಾ. ಪಾಲಾಕ್ಷ, ಈ ಮಗು ಅಪರೂಪದ ದೈಹಿಕ ಸಮಸ್ಯೆಯಿಂದ ಬಳಲುತ್ತಿತ್ತು. ಅಗತ್ಯ ಚಿಕಿತ್ಸೆ ನೀಡಿ ಮಗುವನ್ನು ಚೇತರಿಸಿಕೊಂಡ ನಂತರ ಮಕ್ಕಳ ಕಲ್ಯಾಣ ಸಮಿತಿ ಸಲಹೆಯಂತೆ ಕಾನೂನುಬದ್ಧ ಪ್ರಕ್ರಿಯೆ ಮೂಲಕ ದತ್ತು ನೀಡಲಾಗಿದೆ ಎಂದರು. ಮಗುವಿನ ಭವಿಷ್ಯ ಸುರಕ್ಷಿತವಾಗಿರಲಿ ಎಂಬುದು ನಮ್ಮೆಲ್ಲರ ಆಶಯ.

ಮಗು ಸಂಸ್ಥೆಗೆ ಬಂದ ನಂತರ ೨ ತಿಂಗಳ ಕಾಲ ಪೋಷಕರ ಹುಡುಕಾಟ ನಡೆಯುತ್ತದೆ. ಪೋಷಕರು ಕಾಣಿಸದಿದ್ದರೆ, ಮಕ್ಕಳ ಕಲ್ಯಾಣ ಸಮಿತಿ ದತ್ತು ಪ್ರಕ್ರಿಯೆಗೆ ಅನುಮತಿ ನೀಡುತ್ತದೆ. ನಂತರ ಕೋರ್ಟ್ ಆದೇಶ, ಕೇಂದ್ರ ಸರಕಾರದ ಅನುಮತಿ ಮತ್ತು ಪಾಸ್‌ಪೋರ್ಟ್ ಸಿದ್ದತೆಗಳ ನಂತರ ಮಗು ಹೊಸ ದೇಶಕ್ಕೆ ಪ್ರಯಾಣಿಸುತ್ತದೆ ಎಂದು ವಿವರಿಸಿದರು.

ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಹಲವು ವರ್ಷಗಳಿಂದ ಅನಾಥ ಮತ್ತು ನಿರಾಶ್ರಿತ ಮಕ್ಕಳಿಗೆ ಆರೈಕೆ, ಶಿಕ್ಷಣ ಮತ್ತು ಹೊಸ ಜೀವನದ ಅವಕಾಶ ಒದಗಿಸುತ್ತಿದ್ದು, ಈ ಘಟನೆಯು
ಸಂಸ್ಥೆಯ ಮಾನವೀಯ ನಡೆಗೆ ಮತ್ತೊಂದು ಅಧ್ಯಾಯವಾಗಿದೆ. ಟ್ರಸ್ಟಿಗಳಾದ ಮಧುಪ್ರಿಯ ಹಾಗೂ ಇತರರು ಉಪಸ್ಥಿತರಿದ್ದು, ಮಗುವಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

error: Content is protected !!