15.2 C
Munich
Home ಕ್ರೈಮ್‌ ಹಾಸನ: ಸ್ನೇಹಿತರೊಂದಿಗೆ ಹರಟುತ್ತಾ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ಯುವಕ ದಿಢೀರ್ ಸಾವು!

ಹಾಸನ: ಸ್ನೇಹಿತರೊಂದಿಗೆ ಹರಟುತ್ತಾ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ಯುವಕ ದಿಢೀರ್ ಸಾವು!

Hassan: A young man died suddenly on Tuesday night while having dinner with friends at a hotel in the city.

ಹಾಸನ: ನಗರದ ಹೋಟೆಲ್ ವೊಂದರಲ್ಲಿ ಸ್ನೇಹಿತರೊಂದಿಗೆ ಊಟ ಮಾಡುತ್ತಿದ್ದಾಗಲೇ ಮಂಗಳವಾರ ರಾತ್ರಿ ಯುವಕನೊಬ್ಬ ದಿಢೀರ್ ಮೃತಪಟ್ಟಿದ್ದಾನೆ.

ನೇಪಾಳ ಮೂಲದ ಅಂದಾಜು 28 ವರ್ಷದ ಯುವಕ ಮೃತಪಟ್ಟಿದ್ದಾನೆ. ನಗರದ ಬಿಎಂ ರಸ್ತೆಯ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಯುವಕ ಕೆಲಸ ಮಾಡಿಕೊಂಡಿದ್ದ ಆತ ಸ್ನೇಹಿತರೊಂದಿಗೆ ಬಸಟ್ಟಿಕೊಪ್ಪಲಿನ ಮಾಂಸಾಹಾರಿ ಹೋಟೆಲ್ ಗೆ ಊಟಕ್ಕೆ ಬಂದಿದ್ದ.

ಗೆಳೆಯರೊಂದಿಗೆ ಮಾತನಾಡುತ್ತಾ ಊಟ ಮಾಡುತ್ತಿದ್ದಾಗ ವಾಂತಿಯಾಗಿದೆ. ನಂತರ ಕ್ಷಣಮಾತ್ರದಲ್ಲಿ ಉಸಿರು ನಿಲ್ಲಿಸಿದ್ದಾನೆ.
ಸ್ಥಳಕ್ಕೆ ನಗರ ಠಾಣೆ ಪಿಎಸ್ ಐ ಮೋಹನ್ ಕೃಷ್ಣ ಹಾಗೂ ಸಿಬ್ಬಂದಿ ಬಂದು ಪರಿಶೀಲಿಸಿದರು. ಅಂಬುಲೆನ್ಸ್ ಮೂಲಕ ಮೃತದೇಹವನ್ನು ಹಿಮ್ಸ್ ಗೆ ರವಾನಿಸಲಾಯಿತು.

error: Content is protected !!