ಚನ್ನರಾಯಪಟ್ಟಣ: ಎಸ್.ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಎಚ್.ಕೆ.ನವೀನ್ ಅಧ್ಯಕ್ಷ, ಎಚ್.ಕೆ.ಕಾಂತರಾಜ್ ಉಪಾಧ್ಯಕ್ಷ.

H.K. Naveen has been elected unopposed as the president and H.K. Kantaraj as the vice-president of the S.Hosahalli Milk Producers Cooperative Society in Channarayapatna taluk.

ಚನ್ನರಾಯಪಟ್ಟಣ: ತಾಲ್ಲೂಕಿನ ಎಸ್.ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ನವೀನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಕಾಂತರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಈ ಸಂಘಕ್ಕೆ ನಡೆದ ಚುನಾವಣೆಯಲ್ಲಿ 11 ನಿರ್ದೇಶಕರು ಆಯ್ಕೆಯಾಗಿದ್ದರು. ಬುಧವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎಚ್.ಕೆ.ನವೀನ್ ಹಾಗೂ ಎಚ್.ಕೆ.ಕಾಂತರಾಜ್ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿ ಬಿ.ಕೆ.ವಿಜಯೇಂದ್ರ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಗೌರಮ್ಮ ನಾಗೇಗೌಡ, ವಿನೋದ ಸುಕುಮಾರ್, ದ್ರಾಕ್ಷಾಯಿಣಿ ಅರುಣ್ ಕುಮಾರ್, ರಮೇಶ್, ಪಾರ್ವತಮ್ಮ, ಸುಮಾ ವಿಜಯಕುಮಾರ್, ಶೃತಿ ಮಂಜೇಗೌಡ, ಸುಜಾತ ನಾಗರಾಜ್, ಜಯಲಕ್ಷ್ಮಿ ನಾಗರಾಜ್, ಸಂಘದ ಕಾರ್ಯದರ್ಶಿ ಮಂಜೇಗೌಡ, ಹಾಲು ಪರೀಕ್ಷಕ ಎಚ್.ಎಸ್.ನವೀನ್, ರೈತ ಸಂಘದ ಜಿಲ್ಲಾಧ್ಯಕ್ಷ ಮೀಸೆ ಮಂಜಣ್ಣ ಇತರರು ಇದ್ದರು.

ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೊಸಹಳ್ಳಿ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಸಿಹಿ ವಿತರಿಸಿ, ಅಭಿನಂದನೆ ಸಲ್ಲಿಸಿದರು.

H.K. Naveen has been elected unopposed as the president and H.K. Kantaraj as the vice-president of the S.Hosahalli Milk Producers Cooperative Society in Channarayapatna taluk.