ನುಗ್ಗೇಹಳ್ಳಿ :ಹೋಬಳಿಯ ಹುಲ್ಲೇನಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಶ್ರೀ ಸಾಯಿ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಹಾಗೂ ಶ್ರೀ ಗೋಕುಲ ವಿದ್ಯಾ ಸಂಸ್ಥೆ ಮಾಲೀಕ ನಾರಾಯಣ್ ಅವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಸುಮಾರು 100ಕ್ಕೂ ಹೆಚ್ಚು ಜನ ತಪಾಸಣೆಗೆ ಒಳಗಾಗಿ 35 ಜನರಿಗೆ ಸ್ವಲ್ಪ ಪ್ರಮಾಣದ ಕಣ್ಣಿನ ದೃಷ್ಟಿ ಹೀನತೆ ಹಿನ್ನೆಲೆಯಲ್ಲಿ ರಿಯಾಯಿತಿ ದರದಲ್ಲಿ ಕನ್ನಡಕ ವ್ಯವಸ್ಥೆ ಹಾಗೂ ಯಶಸ್ವಿನಿ ಹಾಗೂ ಹೆಲ್ತ್ ಇನ್ಶೂರೆನ್ಸ್ ಮೂಲಕ 15 ಜನರಿಗೆ ಕಣ್ಣಿನ ಆಪರೇಷನ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಗೋಕುಲ ವಿದ್ಯಾ ಸಂಸ್ಥೆ ನಿರ್ದೇಶಕ ಹುಲ್ಲೇನಹಳ್ಳಿ ನಾರಾಯಣ್ ಮಾತನಾಡಿ, ಗ್ರಾಮದಲ್ಲಿ ಕಣ್ಣಿನ ದೃಷ್ಟಿ ಹೀನತೆ ಸಮಸ್ಯೆಯಿಂದ ಅನೇಕ ಜನರು ಸಮಸ್ಯೆ ಎದುರಿಸುತ್ತಿದ್ದರು ಈ ಹಿನ್ನೆಲೆಯಲ್ಲಿ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಬೆಂಗಳೂರಿನ ಪ್ರತಿಷ್ಠಿತ ಸಾಯಿ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮುಖ್ಯಸ್ಥರನ್ನು ಸಂಪರ್ಕಿಸುವ ಮೂಲಕ ಉಚಿತ ತಪಾಸಣಾ ಶಿಬಿರ ಆಯೋಜಿಸುವಂತೆ ಮನವಿ ಮಾಡಲಾಗಿತ್ತು ನನ್ನ ಹಾಗೂ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ರೋಗಿಗಳ ಕಣ್ಣಿನ ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಸಾಯಿ ನೇತ್ರಾಲಯ ಆಸ್ಪತ್ರೆಯ ಸಿಬ್ಬಂದಿ ರಘುನಂದನ್, ಮುಖಂಡರಾದ ಕಮಲಾಕ್ಷಿ ಗಿರೀಶ್, ಭರತ್ ಯಾದವ್, ಶರತ್ ಯಾದವ್, ಗೋಪಾಲ್ ನಂಜಯ್ಯ, ಜೆಸಿಬಿ ಧರ್ಮರಾಜ್, ಸುರೇಶ್ ( ಕಾವಲು ), ರಂಗಸ್ವಾಮಯ್ಯ, ಜಗದೀಶ್, ಕೃಷ್ಣೇಗೌಡ, ರಂಜಿತ್, ರಾಮಕೃಷ್ಣ, ಲೋಕೇಶ್ ಚಿಕ್ಕೇಗೌಡ, ಮತ್ತು ಗ್ರಾಮಸ್ಥರು ಹಾಜರಿದ್ದರು.
free eye check-up camp was organized in Hullenahalli village of Nuggehalli hobli in collaboration with Sri Sai Nethralaya Super Specialty Eye Hospital, Bengaluru, and Sri Gokula Vidya Sanstha owner Narayan.










