2.7 C
Munich
Home News Politics ಮುರಿಯಲಿಲ್ಲ ಪ್ರೀತಂಗೌಡ ಮುನಿಸು; ವಿಜಯೇಂದ್ರ ಬಂದರೂ ಪ್ರಜ್ವಲ್ ನಾಮಪತ್ರ ಸಲ್ಲಿಕೆಗೆ ಗೈರು

ಮುರಿಯಲಿಲ್ಲ ಪ್ರೀತಂಗೌಡ ಮುನಿಸು; ವಿಜಯೇಂದ್ರ ಬಂದರೂ ಪ್ರಜ್ವಲ್ ನಾಮಪತ್ರ ಸಲ್ಲಿಕೆಗೆ ಗೈರು

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿಯಾಗಿ ಸಂಸದ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಕರುಗಳಾದ ಸಿಮೆಂಟ್ ಮಂಜು, ಎಚ್.ಕೆ.ಸುರೇಶ್, ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ, ವಿಧಾನ ಪರಿಷತ್ ಉಪಾಸಭಾಪತಿ ಪ್ರಾಣೇಶ್ ಎಚ್.ಕೆ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಸಿ.ಸತ್ಯಭಾಮ ಅವರಿಗೆ ಪ್ರಜ್ವಲ್ ನಾಮಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿ ಆಗಮಿಸಿ ಸೂಚಕರಾಗಿ ಸಹಿ ಹಾಕಿದ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ತೆರಳಿದರು. ಇದಕ್ಕೂ ಮೊದಲು ಮಾಜಿಸಚಿವ ಎಚ್.ಡಿ.ರೇವಣ್ಣ, ಎಂಎಲ್‌ಸಿ ಸೂರಜ್‌ರೇವಣ್ಣ, ಭವಾನಿರೇವಣ್ಣ, ಮಾಜಿ ಸಿಎಂ ಡಿ.ವಿ.ಸದಾನಂಗೌಡ ಅವರು ಚುನಾವಣಾಧಿಕಾರಿಗಳ ಕಾರ್ಯಾಲಯದ ಒಳಗೆ ಹೋಗಿ ಬಂದ‌ರು.

ಮುನಿಸು ಮುರಿಯದ ಮಾಜಿ ಶಾಸಕ ಪ್ರೀತಂಗೌಡ, ಬಿ.ವೈ. ವಿಜಯೇಂದ್ರ ಆಗಮಿಸಿದರೂ ನಾಮಪತ್ರ ಸಲ್ಲಿಕೆಗೆ ಬರಲಿಲ್ಲ.

error: Content is protected !!