ಹಾಸನ: ಜಿಲ್ಲೆಯ ರೈತರಿಂದ ಸಮರ್ಪಕ ರೀತಿಯಲ್ಲಿ ಮೆಕ್ಕೆಜೋಳ ಖರೀದಿ ಮಾಡದ ಕೆಎಂಎಫ್ ಪಶು ಆಹಾರ ಕೇಂದ್ರದ ಆಡಳಿತ ಮಂಡಳಿ ಕ್ರಮ ಖಂಡಿಸಿ ರೈತರು ಚನ್ನಪಟ್ಟಣದಲ್ಲಿರುವ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಕೆಎಂಎಫ್‌ನಿಂದ 10 ಸಾವಿರ ಮೆಟ್ರಿಕ್ ಟನ್ ಜೋಳ ಖರೀದಿಗೆ ಸೂಚನೆ ನೀಡಲಾಗಿದೆ. ಇದುವರೆಗೂ 9 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಹಾಸನ ಕೆಎಂಎಫ್ ಖರೀದಿಸಿದೆ.
ಉಳಿದ 1 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನ ರೈತರಿಂದ ಖರೀದಿಸಲು ಕೆಎಂಎಫ್ ಮುಂದಾಗುತ್ತಿದ್ದಂತೆಯೇ ಲೋಡ್‌ಗಟ್ಟಲೆ ಜೋಳ ತುಂಬಿ ಕೊಂಡು ನೂರಾರು ರೈತರು ಕೆಎಂಎಫ್ ಮುಂದೆ ಜಮಾಯಿಸಿದ್ದರು.
ಆದರೆ ಮಂಗಳವಾರದವರೆಗೆ 1 ಸಾವರ ಮೆಟ್ರಿಕ್ ಟನ್ ಖರೀದಿಸಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಸಿಟ್ಟಾದ ರೈತರು, ಎಲ್ಲ ಜೋಳವನ್ನು ಖರೀದಿ ಮಾಡುವಂತೆ ಒತ್ತಾಯಿಸಿ ಕೆಎಂಎಫ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಆಕ್ರೋಶ ಹೊರ ಹಾಕಿದರು.
ಕೆಎಂಎಫ್ ಆದೇಶದಂತೆ ನಾವು ಜೋಳ ಖರೀದಿ ಮಾಡಿದ್ದು, ಆದೇಶ ಮೀರಿ ನಾವು ಏನನ್ನೂ ಮಾಡಲಾಗುವುದಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದರು.
ಆದರೆ ಪಟ್ಟು ಬಿಡದ ರೈತರು ಹೋರಾಟ ಮುಂದುವರಿಸಿದರು. ಕಡೆಗೂ ರೈತರ ಒತ್ತಡಕ್ಕೆ ಮಣಿದ ಕೆಎಂಎಫ್, ಸ್ಥಳದಲ್ಲಿರುವವರ ಜೋಳವನ್ನು ದಿನಾಂಕ ನಿಗದಿ ಮಾಡಿ ಖರೀದಿಸುತ್ತೇವೆ ಎಂದು ಭರವಸೆ ನೀಡಿದರು.
ನಾವು ಆಹ್ವಾನಿಸಿದ ದಿನದಂದು ಮೆಕ್ಕೆಜೋಳ ತರುವಂತೆ ಹೇಳಿದ ಅಧಿಕಾರಿಗಳು, ರೈತರಿಂದ ಆಧಾರ್‌ಕಾರ್ಡ್ ಜೆರಾಕ್ಸ್ ಪಡೆದು ದಿನಾಂಕ ನಿಗದಿ ಮಾಡಿ ಕಳುಹಿಸಿದರು.
Farmers protested in front of the center in Channapatna, condemning the actions of the management board of the KMF Animal Feed Center for not purchasing maize properly from farmers in Hassan district.










