ಹಾಸನ: ಶ್ರೀ ಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠ ಹಾಗೂ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಡಿ.20 ರಂದು ಕು.ಹಿತಾನ್ಯಾ ಬಿ.ವೈ ಅವರಿಂದ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರಿಯ ಭರತನಾಟ್ಯ ಕಲಾವಿದೆ ವಿದುಷಿ ಡಾ.ಸ್ವಾತಿ ಪಿ.ಭಾರಧ್ವಾಜ್ ಹೇಳಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಪರಮಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ನನ್ನ ಶಿಷ್ಯೆ, 10 ವರ್ಷದ ಗ್ರಾಮೀಣ ಪ್ರದೇಶದ ಬಾಲ ಕಲಾವಿದೆ ಹಿತಾನ್ಯಾ, ರಂಗ ಪ್ರವೇಶ ಮಾಡಲಿದ್ದಾಳೆ ಎಂದರು.
ಶ್ರವಣಬೆಳಗೊಳದ ಪಂಪ ಗ್ರಂಥಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರೀಸಾವೆ ಹೋಬಳಿ ಬಾಳಗಂಜಿ ಗ್ರಾಮದ ಹಿತಾನ್ಯಾ, ಸುಮಾರು 2 ಗಂಟೆಗಳ ಕಾಲ ನಿರಂತರವಾಗಿ ಭರತ ನಾಟ್ಯ ಮಾಡಲಿದ್ದಾಳೆ ಎಂದರು.
ಹಿತಾನ್ಯಾ ಅಸಾಧಾರಣ ಪ್ರತಿಭೆ ಹೊಂದಿರುವ ಕುವರಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಗುವಿನ ಪ್ರತಿಭೆ ಕಂಡು ಈಕೆಯಿಂದ ಏನಾದರೂ ಸಾಧನೆ ಮಾಡಿಸಬೇಕೆಂದು ಸಂಕಲ್ಪ ಮಾಡಿ, ನಿರ್ವಂಚನೆಯಿಂದ ಶಾಸ್ತ್ರಿಯ ನೃತ್ಯವನ್ನು ನಿರಂತರ 3 ವರ್ಷ ತರಬೇತಿ ನೀಡಿ, ಶಾಸ್ತ್ರಿಯವಾಗಿ ಭರತ ನಾಟ್ಯದಲ್ಲಿ ರಂಗ ಪ್ರವೇಶ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಪರಮಪೂಜ್ಯ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಇದೀಗ ಶ್ರವಣಬೆಳಗೊಳದ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ನನ್ನ ಶಿಷ್ಯೆಯ ರಂಗಪ್ರವೇಶ ಮಾಡುವ ಮೂಲಕ ಅವರ ಹಾಗೂ ನನ್ನ ಕನಸು ನನಸಾಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಅಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಶ್ರೇಯಸ್ ಎಂ. ಪಟೇಲ್, ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ಎಸ್ಎಲ್ಒ ಡಾ.ವಿ. ಮಂಜುನಾಥ್ ಭಾಗವಹಿಸಲಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಉಪಾಧ್ಯಕ್ಷ ಎಚ್.ಬಿ. ಮದನಗೌಡ, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ, ವಿಶೇಷ ಆಹ್ವಾನಿತ ಸದಸ್ಯ ರವಿ ನಾಕಲಗೂಡು, ಮುಖ್ಯ ಇಂಜಿನಿಯರ್ ಸತೀಶ್ ಚಂದ್ರ ಎನ್.ಎಸ್., ಇಇ ಗೋಕುಲ್ ಕೆ., ಪೂರ್ಣಚಂದ್ರ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಡಾ. ವಿಜಯಕುಮಾರ್, ಡಾ.ಆಶಾ ವಿಜಯಕುಮಾರ್, ಕೆ.ಬಲರಾಮ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ರಂಗಪ್ರವೇಶ ಪಕ್ಕ ವಾದ್ಯ ವಿಭಾಗದಲ್ಲಿ ನಟ್ಟುವಾಂಗಮ್,ವಿದುಷಿ ಸ್ವಾತಿ ಪಿ. ಭಾರದ್ವಾಜ್, ಗಾಯನ,ವಿದುಷಿ ಅಕ್ಷತಾ ಉಪಾಧ್ಯಾಯ, ಮೃದಂಗ ವಿದುಷಿ ಶಶಿಕಲಾ ಕೆ.,ವೈಯಲಿನ್ ವಿದುಷಿ ರಮ್ಮಾ ಚೇತನ್, ರಿದಂ ಪ್ಯಾಡ್ ವಿದುಷಿ ಎಂ.ಕೆ. ವಾಸವಿ ಸಹಕರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಅಧ್ಯಕ್ಷೆ ಅನಿತಾ ಪ್ರಕಾಶ್, ಬಾಲ ಕಲಾವಿದೆ ಕು. ಹಿತಾನ್ಯಾ, ಅವರ ತಾಯಿ ರಾಣಿ ಯೋಗೇಶ್ ಇದ್ದರು.
Speaking about this at a press conference today, he said, “With the blessings of His Holiness Swastishree Abhinava Charukirthi Bhattarak Mahaswamiji, my disciple, a 10-year-old child artist from a rural area, Hitanya, is going to make her stage debut.”










