ಸಕಲೇಶಪುರ: ಸೆಸ್ಕ್ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಅಗತ್ಯ ಮಾಹಿತಿ ಒದಗಿಸದೇ ತಮಗೆ ದಿನನಿತ್ಯ ತೊಂದರೆ ನೀಡಲಾಗುತ್ತಿದೆ ಎಂದು ವಿದ್ಯುತ್ ಗುತ್ತಿಗೆದಾರರು ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಂಗಳವಾರ ಸಂಜೆ ಸೆಸ್ಕ್ ಕಛೇರಿ ಎದುರು ದಿಡೀರ್ ಮುಷ್ಕರ ನಡೆಸಿದರು ಈ ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಪ್ರೆಮ್ ನಾಥ ಮಾತನಾಡಿ, ತುಂಬ ವಿಸ್ತಾರವಾದ ತಾಲೂಕು ಆಗಿರುವ ಸಕಲೇಶಪುರದಲ್ಲಿ ದೂರ ಊರುಗಳಿಂದ ವಿದ್ಯುತ್ ಸಂಪರ್ಕ ಪಡೆಯಲು ಆಗಮಿಸುವ ಗ್ರಾಹಕರಿಗೆ ಕಛೇರಿಯಲ್ಲಿ ಸರಿಯಾದ ಮಾಹಿತಿ ನೀಡದೆ ತೊಂದರೆ ಕೊಡಲಾಗುತ್ತಿದೆ.
ತಾಲ್ಲೂಕಿಗೆ ಎಐಟಿ ಹುದ್ದೆ ಮಂಜೂರು ಆಗಿದ್ದರು ಅವರನ್ನು ಬೇರೆ ಕಡೆ ಕಳುಹಿಸಲಾಗಿದೆ. ಇಲ್ಲಿ ಗುತ್ತಿಗೆ ದಾರರಿಗೆ ಇಲ್ಲ ಸಲ್ಲದ ಕಾರಣ ಹೇಳಿ ಸಂಪರ್ಕ ನೀಡಲು ನಿರಾಕರಣೆ ಮಾಡಲಾಗುತ್ತಿದೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು 2 ತಿಂಗಳು ಕಳೆದರು ಸಾಧ್ಯವಾಗುತಿಲ್ಲ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತಿದ್ದು ಇಲಾಖೆಯಲ್ಲಿ ಕೆಲ ನೌಕರರೆ ವಿದ್ಯುತ್ ಗುತ್ತಿಗೆ ಕೆಲಸ ನಿರ್ವಹಣೆ ಮಾಡುತಿದ್ದಾರೆ.
ಇದರಿಂದ ವಿದ್ಯುತ್ ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿದರು ಕಛೇರಿಯಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಕಚೇರಿಯಲ್ಲಿ ಲಭ್ಯವಿಲ್ಲದೆ ಕೆಲಸ ನಿರ್ವಹಿಸಲು ಅಸಾಧ್ಯವಾಗುತ್ತಿದೆ.
ಸಕಲೇಶಪುರ ಉಪವಿಭಾಗಕ್ಕೆ ಸೂಕ್ತ ಎಐಟಿ (AIT) ಅಧಿಕಾರಿಯನ್ನು ನೇಮಿಸಬೇಕು. ಇಲ್ಲದಿದ್ದಲ್ಲಿ ಕೆಇಆರ್‌ಸಿ ಸುತ್ತೋಲೆ ವಿವರಗಳನ್ನು ಕಚೇರಿ ಫಲಕದಲ್ಲಿ ಲಗತ್ತಿಸಿ ಸಾರ್ವಜನಿಕರಿಗೆ ಹಾಗೂ ಗುತ್ತಿಗೆದಾರರಿಗೆ ಮಾಹಿತಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದರು.
ಚೆಸ್ಕಾಂ ಕಚೇರಿಯಲ್ಲಿ ಯಾವುದೇ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಸರಿಯಾದ ಮಾಹಿತಿ ದೊರೆಯದ ಕಾರಣ ವಿದ್ಯುತ್ ಗುತ್ತಿಗೆದಾರರಿಗೆ ದಿನನಿತ್ಯ ತೊಂದರೆ ಉಂಟಾಗುತ್ತಿದೆ. ಈ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರು ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರ ಉಪಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿಗಳು ಧರ್ಮೆಂದ್ರ ಶೆಟ್ಟಿ, ರಫಿಕ್, ಕೇಂದ್ರ ಸಮಿತಿಯ ಮೋಹನ್ ಕುಮಾರ್ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.
Electricity contractors protested in front of the Chescom office, saying that corruption is rampant at the Chescom office and that electricity contractors are being harassed on a daily basis without providing necessary information.










