ಚಿಕ್ಕಮಗಳೂರು: ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕಾರು – ಓರ್ವ ಯುವಕ ಸಾ***, ಐವರು ವಿದ್ಯಾರ್ಥಿಗಳಿಗೆ ಗಾಯ

19-year-old youth died and five others were seriously injured when a car coming from Mudigere towards Chikmagalur lost control and fell into a field opposite the Moogihalli lake on Tuesday evening.

ಚಿಕ್ಕಮಗಳೂರು: ಮೂಡಿಗೆರೆಯಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಮೂಗ್ಗಿಹಳ್ಳಿ ಕೆರೆ ಎದುರಿನ ಗದ್ದೆಗೆ ಬಿದ್ದ ಪರಿಣಾಮ 19 ವರ್ಷದ ಯುವಕ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

ಅಪಘಾತಕ್ಕೆ ಒಳಗಾದ ಕಾರು ಸ್ವಿಫ್ಟ್ ಡಿಜೈರ್ (KA-14 N-9113) ಆಗಿದ್ದು, ಕಾರಿನಲ್ಲಿ ಒಟ್ಟು 6 ರಿಂದ 7 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಮೊಹಿನ್ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಯಗೊಂಡವರನ್ನು ರಿಹಾನ್ (17), ಸತ್ಯಪಾಲ್ (18), ಪೂರ್ಣ (18), ಶ್ರೇಯಸ್ (18) ಮತ್ತು ರಘು (18) ಎಂದು ಗುರುತಿಸಲಾಗಿದ್ದು, ಎಲ್ಲರೂ ಚಿಕ್ಕಮಗಳೂರು ಮೂಲದವರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಹಾಗೂ ಗಾಯಾಳುಗಳು MES ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಕಾರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

19-year-old youth died and five others were seriously injured when a car coming from Mudigere towards Chikmagalur lost control and fell into a field opposite the Moogihalli lake on Tuesday evening.