ಇ-ಆಡಳಿತ ಸೇವೆಗೆ ಸ್ವರೂಪ್ ಚಾಲನೆ

ಹಾಸನ: ನಗರದ ಎಂ.ಜಿ. ರಸ್ತೆಯಲ್ಲಿರುವ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನೂತನವಾಗಿ ಆರಂಭಿಸಿರುವ ಇ-ಆಡಳಿತ ಸೇವೆಯನ್ನು ಶಾಸಕ ಹೆಚ್.ಪಿ. ಸ್ವರೂಪ್ ಅವರು ಟೇಪ್
ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಾಹಿ ಪೇಪರನ್ನು ಕಡಿಮೆ ಉಪಯೋಗಿಸಿ ಮುದ್ರಣವಾಗಿರುವ ಎಲ್ಲಾ ದಾಖಲೆಯನ್ನು ಮುಂದಿನ ಎರಡು ಮೂರು ವರ್ಷಗಳಲ್ಲಿ ಇ-ಆಡಳಿತಕ್ಕೆ ಸೇರಿಸಲಾಗುವುದು. ಇಂತಹ ಸೇವಾ ಚಟುವಟಿಕೆಯನ್ನು ರಾಜ್ಯ ಸರಕಾರ ಮಾಡುತ್ತಿರುವುದು ಉತ್ತಮವಾಗಿದೆ ಎಂದರು.
ತಾAತ್ರಿಕವಾಗಿ ನೋಡಿದರೆ ಎಲ್ಲಾ ದಾಖಲೆಯನ್ನು ಪೇಪರ್‌ನಲ್ಲಿ ಇಡುವುದರಿಂದ ಹತ್ತು ವರ್ಷ ಕಳೆದ ಮೇಲೆ ಅದರ ಕ್ವಾಲಿಟಿ ಕಳೆದುಕೊಳ್ಳುತ್ತದೆ.ಆದರೆ ಸಿಸ್ಟಂನಲ್ಲಿ ದಾಖಲಿಸಿರುವುದರಿಂದ ಎಲ್ಲವೂ ಹಾಗೆಯೇ ಉಳಿದಿರುತ್ತದೆ. ಯಾವುದೇ ಕಾರಣಕ್ಕೂ ಅಳಿಸಿ ಹೋಗುವುದಿಲ್ಲ. ಇದರಿಂದ ಮೇಜರ್ ವಿಚಾರಗಳು ಶಾಶ್ವತವಾಗಿ ಉಳಿಯುತ್ತದೆ ಎಂದು ಕಚೇರಿ ಸಿಬ್ಬಂದಿ ಮಾಹಿತಿ ನೀಡಿದರು.ಇದೇ ವೇಳೆ ತಹಸೀಲ್ದಾರ್ ಶ್ವೇತಾ, ಶಿರಸ್ತೇದಾರರಾದ ತಿಮ್ಮಯ್ಯ, ಪ್ರಭಾಕರ್, ಅನೀಲ್ ಇತರರು ಉಪಸ್ಥಿತರಿದ್ದರು.