ಸಕಲೇಶಪುರ: ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿ ವಿಸರ್ಜನೆ ವೇಳೆ ಆಯೋಜಕರು ಹಾಗೂ ಪೋಲಿಸರ ಮದ್ಯದ ಸಮಸ್ಯೆಯಿಂದಾಗಿ ಗಂಟೆಗಳ ಕಾಲ ಗಣಪತಿ ಮದ್ಯರಸ್ತೆಯಲ್ಲಿ ಏಕಾಂಗಿಯಾಗಿತ್ತು.
ಕುಶಾಲನಗರ ಬಡಾವಣೆಯ ಅಣ್ಣಪ್ಪ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮ ಬುದುವಾರ ಆಯೋಜಿಸಲಾಗಿತ್ತು. ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಡಿ.ಜೆ ಸದ್ದು,ಪಟಾಕಿಗಳ ಚಿತ್ತಾರದ ನಡುವೆ ಆದ್ದೂರಿಯಾಗಿ ಮೆರವಣಿಗೆ ನಡೆಸಲಾಗಿತ್ತು.
ಆದರೆ, ಸಕಲೇಶ್ವರ ಸ್ವಾಮಿ ದೇವಸ್ಥಾನ ಸಮೀಪ ಮೆರವಣಿಗೆ ಆಗಮಿಸಿದ ವೇಳೆ ಪೋಲಿಸರು ಡಿ.ಜೆ ಬಂದ್ ಮಾಡಿಸಿದರು. ಇದರಿಂದ ಸಿಟ್ಟಾದ ಆಯೋಜಕರು 10.30 ರವರಗೆ ಡಿ.ಜೆ ಬಳಸಲು ಅನುಮತಿ ಪಡೆಯಲಾಗಿದೆ. ಆದರೆ,10 ಗಂಟೆಗೆ ಡಿ.ಜೆ ಬಂದ್ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯರು,ಮಕ್ಕಳು ಸೇರಿದಂತೆ ಆಯೋಜಕರು ಪ್ರತಿಭಟನೆ ನಡೆಸಿ, ಡಿ.ಜೆ ಬಳಸಲು ಅನುಮತಿ ನೀಡದ ಹೊರತು ಗಣೇಶಮೂರ್ತಿ ವಿಸರ್ಜಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಪೋಲಿಸರು ಡಿ.ಜೆ ಬಳಸಲು ನ್ಯಾಯಾಲಯ ಅನುಮತಿ ನಿರಾಕರಿಸಿದೆ ಮಾನಯೀಯತೆ ಆಧಾರದ ಮೇಲೆ ಡಿ.ಜೆ ಬಳಕೆ ಅನುಮತಿ ನೀಡಲಾಗಿದೆ ಎಂದರು. ಇದರಿಂದ ಆಕ್ರೋಶಗೊಂಡ ಆಯೋಜಕರು ಗಣೇಶಮೂರ್ತಿಯಿಂದ ದೂರ ಸರಿದು ಪೋಲಿಸರೆ ವಿಸರ್ಜಿಸಲಿ ಎಂದು ಪಟ್ಟುಹಿಡಿದರು. ರಾತ್ರಿ 10.30 ರಿಂದ 12 ಗಂಟೆವರಗೆ ಆಯೋಜಕರು ಹಾಗೂ ಪೋಲಿಸರ ನಡುವೆ ವಾದವಿವಾದ ನಡೆದು ಅಂತಿಮವಾಗಿ ಆಯೋಜಕರ ಮನವೊಲಿಸುವ ಮೂಲಕ ಗಣೇಶನನ್ನು ಹೇಮಾವತಿ ನದಿಯಲ್ಲಿ ವಿಸರ್ಜಿಸಲಾಯಿತು. ಗಣೇಶ್ ವಿಸರ್ಜನೆ ಅಂಗವಾಗಿ ಪಟ್ಟಣದಲ್ಲಿ ಬಾರಿ ಬಂದುಬಸ್ತ್ ಏರ್ಪಡಿಸಲಾಗಿತ್ತು.










