ದುಬೈ: ದುಬೈನ ಗ್ಲೋಬಲ್ ವಿಲೇಜ್ನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ “ವೈಲ್ಡ್ ಟೈಗರ್ ಸಫಾರಿ” ಟೀಸರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.
“ವೈಲ್ಡ್ ಟೈಗರ್ ಸಫಾರಿಗೆ” ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ಡಿ ಸೋಜಾ ಸಾಥ್ . ಕೆಜಿಎಫ್ ಖ್ಯಾತಿಯ ಚಂದ್ರಮೌಳಿ ನಿರ್ದೇಶನದ ಚಿತ್ರ ವೈಲ್ಡ್ ಟೈಗರ್ ಸಫಾರಿ. ಶಿಥಿಲ್ ಪೂಜಾರಿ, ಧರ್ಮೇಶ್ , ಸುಶಾಂತ್, ಕೆಜಿಎಫ್ ಅವಿನಾಶ್, ಅಚ್ಯುತ್ ಕುಮಾರ್,ನಿಮಿಕಾ ರತ್ನಾಕರ್ ಅಭಿನಯದ ಸಿನಿಮಾವನ್ನ ವಿಕೆ ಫಿಲ್ಮಂ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಜನವರಿ 10 ರಂದು 11ಗಂಟೆ 17ನಿಮಿಷಕ್ಕೆ ವೈಲ್ಡ್ ಟೈಗರ್ ಸಫಾರಿ ಟೀಸರ್ VK FILMS YOUTUBE Channel ನಲ್ಲಿ ಬಿಡುಗಡೆ ಆಗಲಿದೆ.










