ಹುಕ್ಕೆರಿ:ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನಲೆಯಲ್ಲಿ ಹುಕ್ಕೆರಿ ತಾಲೂಕಿನಲ್ಲಿ ಪಿಕೆಪಿಎಸ್ ಸಭೆಗಳಲ್ಲಿ ಗಲಾಟೆ ನಡೆಯುತ್ತಿರುವುದಕ್ಕೆ ಕತ್ತಿ ಕುಟುಂಬವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.
ಅವರು, 93 ಸ್ಥಾನಗಳ ಪೈಕಿ ಮೂವತ್ತೇಳು, ಕಡೆಯಲ್ಲೇ ಮಾತ್ರ ಗಲಾಟೆಯಾಗಿದೆ. ಅವು ಸ್ಥಳೀಯ ಸಮಸ್ಯೆಯಾದ. ಆದರೆ ಅದನ್ನು ವೈಯಕ್ತಿಕವಾಗಿ ಜನರ, ಬೇರೆ ಕಡೆಯ ಸಭೆಗೆ ಸಂಬಂಧಿಸದ ವಿಷಯವಾಗಿ ಕತ್ತಿ ಕುಟುಂಬವೇ ಕಾರಣ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಪರಿಸ್ಥಿತಿಯೂ ಉಂಟಾಗಿಲ್ಲ. ಜಿಲ್ಲೆಯಲ್ಲಿ ಪಿಕೆಪಿಎಸ್ ಸಭೆಗಳು ಶಾಂತಿಯುತವಾಗಿ ನಡೆಯುತ್ತಿವೆ. ಗಲಾಟೆ ನಡೆಸುವವರಿಗೆ ಕಾನೂನು ಬಾಹಿರವಾಗಿ ವರ್ತಿಸುವ ಹಕ್ಕಿಲ್ಲ. ಕಾನೂನು ತನ್ನ ಕೆಲಸ ಮಾಡುತ್ತದೆ. ಅವರು ತಮ್ಮ ವೈಯಕ್ತಿಕ ರಾಜಕೀಯ ಹಿತಾಸಕ್ತಿ ಪೂರೈಸಲು ಜನರನ್ನು ತಪ್ಪು ದಾರಿಯಲ್ಲಿ ನಡಿಸುತ್ತಿದ್ದಾರೆ.










