ಹಾಸನ: ಸಾಕಷ್ಟು ಮಹನೀಯರ ತ್ಯಾಗ ಬಲಿದಾನದಿಂದ ಪಡೆದ ಸ್ವಾತಂತ್ರ್ಯ ಉಳಿಯಬೇಕೆಂದರೆ ಉಳಿಯಬೇಕೆಂದರೆ ನ್ಯಾಯ ಸಮ್ಮತ ಚುನಾವಣೆ ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ದೇಶಕ್ಕೆ ಬಹಳ ಸಂಘರ್ಷದ ನಂತರ ಸ್ವಾತಂತ್ರ್ಯ ಬಂದಿದೆ. ನಮಗೆ ಯಾರು ಸ್ವಾತಂತ್ರ್ಯ ಕೊಡಲಿಲ್ಲ. ಸ್ವಾತಂತ್ರ್ಯ ಕೊಡಬಾರದೆಂದು ಬಹಳ ಪ್ರಯತ್ನ ಮಾಡಿದರು.
ನಾವು ಆಳುಗಳಾಗಿ ಕೆಲಸ ಮಾಡಬೇಕೆಂಬುದು ಅವರ ಉದ್ದೇಶವಾಗಿತ್ತು. ಭಾರತೀಯರ ಸಂಘರ್ಷ, ಸ್ವಾತಂತ್ರ್ಯ, ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಯಾರದೋ ದಾಸ್ಯದಲ್ಲಿ ನಾವು ಬದುಕುತ್ತಿಲ್ಲ. ಮಹನೀಯರ ಋಣದಲದಲಿ ಭಾರತ ಎಂದೆಂದಿಗೂ ಇರುತ್ತೆ. ಮನೆ ಮಠ ತೊಋದು ಅವರು ಸ್ವಾತಂತ್ರ್ಯ ತಂದುಕೊಡದಿದ್ದರೆ ಎಷ್ಟು ವರ್ಷದ ದಾಸ್ಯದಲ್ಲಿ ಬದುಕುತ್ತಿದ್ದೆವು. ಇದನ್ನೆಲ್ಲ ಭಾರತೀಯರು ಸ್ಮರಿಸಬೇಕು.
ಅವರ ಸ್ಮರಿಸುವುದು ನಮ್ಮ ಧರ್ಮ. ಜಿಲ್ಲೆಯ ಅನೇಕ ಮಹನೀಯರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಸಾಧಿಸಬೇಕಾಗಿರುವುದು ಸಾಕಷ್ಟಿದೆ ಎಂದರು. ಇದೆ ವೇಳೆ ಮತಗಳ್ಳತನ ವಿಚಾರ ಕುರಿತು ಪ್ರಸ್ತಾಪಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಆಧಾರ ಸ್ತಂಭ. ಆಯೋಗ ನಿಷ್ಪಕ್ಷಪಾತ ಕೆಲಸ ಮಾಡಬೇಕು.
ಇದು ಪ್ರತಿಯೊಬ್ಬರ ಆಶಯ. ನ್ಯಾಯ ಸಮ್ಮತವಾಗಿ ಚುನಾವಣೆ ನಡೆದರೆ ಮಾತ್ರ ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯ ಉಳಿಯಲು ಸಾಧ್ಯ. ನಿಷ್ಪಕ್ಷಪಾತವಾಗಿ ಆಯೋಗ ಕೆಲಸ ಮಾಡಬೇಕು. ನಮ್ಮ ಸ್ವಾತಂತ್ರ್ಯ ವನ್ನು ನಾವೇ ಕಳೆದುಕೊಳ್ಳುವಂತಾಗಬಾರದು. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಜೀವ ಕಳೆದುಕೊಳ್ಳದ ಹಾಗೆ ನೋಡಬೇಕು ಎಂದರು.










