ಹಾಸನ: ಈ ಬಾರಿಯ ಹಾಸನಾಂಬೆ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮತ್ತು ಜಿಲ್ಲಾಡಳಿತ ಎಲ್ಲ ರೀತಿಯಲ್ಲೂ ಒಳ್ಳೇ ಕ್ರಮ ಕೈಗೊಂಡಿದೆ. ಆದರೆ ನಗರದ ಸೌಂದರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಎಲ್ಲ ಕಡೆ ಮೂರೂ ರಾಜಕೀಯ ಪಕ್ಷಗಳ ಮುಖಂಡ ಫ್ಲೆಕ್ಸ್ ರಾಜಾಜಿಸುತ್ತಿದ್ದು, ಕೂಡಲೇ ತೆರಳು ಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಆಗ್ರಹಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವರು, ಜಿಲ್ಲಾಡಳಿತದ ನಿರ್ಧಾರದಿಂದ ಅಪಾರ ಭಕ್ತರಿಗೆ ಅನುಕೂಲವಾಗಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಯಲ್ಲೇ ಕೋಟ್ಯಂತರ ರೂ. ಖರ್ಚು ಮಾಡಿ ನಗರದ ತುಂಬೆಲ್ಲಾ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.
ಆದರೆ ಎಲ್ಲ ಪಕ್ಷಗಳವರ ಫ್ಲೆಕ್ಸ್ಗಳು ದೀಪಲಂಕಾರಕ್ಕೆ ಧಕ್ಕೆ ತಂದಿದ್ದು, ಎಷ್ಟೋ ಕಡೆ ಅಲಂಕಾರವೇ ಕಾಣದಂತಾಗಿದೆ. ಹಾಸನಾಂಬೆ ಉತ್ಸವ ಯಾವುದೇ ರಾಜಕೀಯ ಕಾರ್ಯಕ್ರಮ ಅಲ್ಲ, ಹಾಗಾಗಿ ಸೌಂದರ್ಯ ಹಾಳುಮಾಡುವ ಫ್ಲೆಕ್ಸ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಸಚಿವರು ಇತ್ತ ಗಮನ ಹರಿಸಿ ಕೂಡಲೇ ಎಲ್ಲ ಫ್ಲೆಕ್ಸ್ ತೆರವು ಗೊಳಿಸಬೇಕು.
ಹಾಗೆಯೇ ಹಾಸನಾಂಬೆ ಉತ್ಸವದ ಪ್ರೋಟೋಕಾಲ್ ವಾಹನಗಳು ನಾಗಾಲ್ಯಾಂಡ್, ಪಾಂಡುಚೇರಿ, ಡೆಹ್ರಾಡೂನ್ ನೋಂದಣಿ ಉಳ್ಳವು. ಆದರೆ ಮಾಲೀಕರು ಮಾತ್ರ ಹಾಸನದವರು, ಕೇಂದ್ರ ಸರ್ಕಾರದ ತೆರಿಗೆ ಫ್ರೀ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇವರಿಗೆ ಕಾನೂನು ಅನ್ವಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.










