ಧಾರವಾಡ : ಆ ಯುವತಿ ಇನ್ನು ಬದುಕಿ ಬಾಳಬೇಕಾದವಳು, ಕೇವಲ 21 ವಯಸ್ಸಿನ ಯುವತಿಯನ್ನ ದುಷ್ಕರ್ಮಿಯೊಬ್ಬನು ಅವಳ ವೇಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನಿರ್ಜಲ್ ಪ್ರದೇಶದಲ್ಲಿ ಎಸೆದು ಹೊಗಿದ್ದಾನೆ, ಅಷ್ಟಕ್ಕೂ ಯುವತಿಯೊಬ್ಬಳನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು ಯಾರು ಆಕೆಯ ಶವವನ್ನು ಧಾರವಾಡ ಹೊರವಲಯದಲ್ಲಿ ಬಿಸಾಕಿ ಹೋಗಿದ್ದಾರೆ.
ಧಾರವಾಡ ತಾಲೂಕಿನ ಮನಸೂರು ಗ್ರಾಮದ ರಸ್ತೆಯ ಪಕ್ಕದಲ್ಲಿ ನಡೆದ ಘಟನೆ, ಅಷ್ಟಕ್ಕೂ ಧಾರವಾಡ ಗಾಂಧಿಚೌಕ ನಿವಾಸಿಯಾದ ಝಕಿಯಾ ಮುಲ್ಲಾ (21 )ಎಂಬಾಕೆಯೇ ಕೊಲೆಗೀಡಾದ ದುರ್ದೈವಿ ಎಂದು ಗೊತ್ತಾಗಿದೆ ಇವಳು ಪ್ಯಾರಾಮೆಡಿಕಲ್ ಓದಿದ್ದ ಝಕಿಯಾ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದಳು ನಿನ್ನೆ ಸಂಜೆ ಮನೆಯಿಂದ ಹೋಗಿದ್ದ ಈಕೆ ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ ಆದರೆ, ಬುಧವಾರ ಬೆಳಗಿನ ಜಾವ ಆಕೆಯ ಶವ ವಿನಯ್ ಡೇರಿ ರಸ್ತೆಯಲ್ಲಿ ಕಂಡು ಬಂದಿದೆ.
ಆಕೆಯ ಕುತ್ತಿಗೆಗೆ ವೇಲ್ನಿಂದ ಬಿಗಿದು ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದವರು ಯಾರು ಎಂಬುದು ಗೊತ್ತಾಗಿಲ್ಲ ಸದ್ಯ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿರುವ ಕೊಲೆ ಬೆಚ್ಚಿ ಬಿಳಿಸಿದೆ..ಇನ್ನು ಯುವತಿ ತಂದೆ ನನ್ನ ಮಗಳ ಸಾವಿಗೆ ಕಾರಣರಾದವರನ್ನ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಸ್ಥಳಕ್ಕೆ ಬೇಟಿ ನೀಡಿದ ಬಳಿಕ ಎಸ್ಪಿ ಗುಂಜನ್ ಆರ್ಯ ಮಾತನಾಡಿ ಇದು ಮೆಲ್ನೋಟಕ್ಕೆ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ, ಯುವತಿಯ ಮೈಮೆಲೆ ಇರುವ ಗಾಯದ ಗುರುತು, ಪತ್ತೆ ಹಚ್ಚಿ ಅವಳನ್ನ ಕೊಲೆ ಮಾಡಿದವರು ಯಾರು, ಅವಳನ್ನು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆ ಬಳಿಕ ಗೊತ್ತಾಗಲಿದೆ .
ನಾವು ಕೂಡಾ ಅವಳ ಕಾಲ್ ಡಿಟೆಲ್ಸ್ಗಳನ್ನ ಚೆಕ್ ಮಾಡ್ತಾ ಇದೆವಿ, ಅವಳು ಯಾರ ಜೊತೆ ಮಾತಾಡ್ತಾ ಇದ್ಲು ನಿನ್ನೆ ಸಂಜೆ ಯಾವಾಗ ಮನೆಯಿಂದ ಹೋಗಿದ್ದಾಳೆ ಎಂಬುದರ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದೆವೆ ನಾವು ಆದಷ್ಡು ಬೇಗ ಈ ಕೊಲೆಯ ಹಿಂದಿನ ರಹಸ್ಯ ಏನೂ ಎಂಬುದರ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೆವೆ.
ಬಾಳಿ ಬದುಕಬೇಕಿದ್ದ ಈ ಯುವತಿ ಸದ್ಯ ಇವಳ ಸಾವು ಅನುಮಾನಕ್ಕೆ ಎಡೆ ಮಾಡಿಕ್ಕೊಟ್ಟಿದೆ ಮೆಲ್ನೋಟಕ್ಕೆ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಗೊತ್ತಾಗಿದ್ದು ಇನ್ನು ಗ್ರಾಮೀಣ ಪೋಲಿಸರು ಮೃತ ದೇಹ ಮರಣೋತ್ತರ ಪರೀಕ್ಷೆ ಬಳಿಕ ಕೊಲೆ ಮಾಡಿದ್ದು ಯಾರು ಯಾವ ಕಾರಣಕ್ಕೆ ಮಾಡಿದ್ದಾರೆ ಕೊಲೆ ಮಾಡಿರುವ ಆರೋಪಿಗಳಿನ್ನ ಪೊಲೀಸರು ಪತ್ತೆ ಹಚ್ಚಬೇ










