‘ಡೆವಿಲ್’ ಚಿತ್ರದ ಮೂಲಕ ಕರಾವಳಿ ಸುಂದರಿ ರಚನಾ ರೈ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟಿದ್ದಾರೆ. ದರ್ಶನ್ ಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಒಂದ್ಕಡೆ ವೃತ್ತಿ ಬದುಕಿನ ಆರಂಭದಲ್ಲಿ ಸ್ಟಾರ್ ಹೀರೋ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ಖುಷಿ. ಈಗ ಸಿನಿಮಾ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ತಮ್ಮ ಚೊಚ್ಚಲ ಕನ್ನಡ ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿ ಡೆವಿಲ್ ಕ್ವೀನ್ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ರಚನಾ ರೈ ಈಗ ಪ್ರತಿಷ್ಠಿತ ಆಭರಣವೊಂದರ ರಾಯಭಾರಿಯಾಗಿದ್ದಾರೆ. ನವರತ್ನ ಆಭರಣದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ ರಚನಾ ರೈ. ಈಗಾಗಲೇ ತುಳು ಚಿತ್ರಗಳ ಮೂಲಕ ಅಭಿನಯದಲ್ಲಿ ನಿಪುಣೆ ಎನಿಸಿಕೊಂಡಿರುವ ಇವರು ಅಂದಗಾರ್ತಿ ಕೂಡ. ಪಕ್ಕದ್ಮನೆ ಹುಡುಗಿ ಫೀಲ್ ಕೊಡುವ ರಚನಾ ರೈ ಪ್ರತಿಷ್ಠಿತ ಆಭರಣದ ರಾಯಭಾರಿಯಾಗಿದ್ದಾರೆ. ಡೆವಿಲ್ ಸಿನಿಮಾ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಪಡೆಯವ ತವಕದಲ್ಲಿದ್ದಾರೆ ಈ ಮಂಗಳೂರು ಸುಂದರಿ.










