15.2 C
Munich
Home News Politics ಎತ್ತಿನಹೊಳೆ ಯೋಜನೆ: ಚಾಮುಂಡೇಶ್ವರಿಗೆ ನಮಿಸಿ ಟ್ರಯಲ್ ರನ್ ಆರಂಭಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

ಎತ್ತಿನಹೊಳೆ ಯೋಜನೆ: ಚಾಮುಂಡೇಶ್ವರಿಗೆ ನಮಿಸಿ ಟ್ರಯಲ್ ರನ್ ಆರಂಭಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

ಹಾಸನ: ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರಾಯೋಗಿಕವಾಗಿ ಎತ್ತಿನಹೊಳೆ ಯೋಜನೆಯ ಚೆಕ್ ಡ್ಯಾಂನಿಂದ ನೀರು ಎತ್ತುವ ಕಾರ್ಯಕ್ಕೆ ತಾಯಿ ಚಾಮುಂಡೇಶ್ವರಿ ನೆನಪಿಸಿಕೊಂಡು ಮೋಟರ್ ಪಂಪ್ ಆನ್ ಮಾಡಿದರು.

ಸಕಲೇಶಪುರ ತಾಲ್ಲೂಕಿನ, ಕುಂಬರಡಿ ಬಳಿ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಕಾಮಗಾರಿ ಪರಿಶೀಲಿಸಿದ ಅವರು ತಾಯಿ ಚಾಮುಂಡಿ ನೆನಪಿಸಿಕೊಂಡು ಬಟನ್ ಒತ್ತುತ್ತಿದ್ದೇನೆ. ಉದ್ಘಾಟನೆಗೆ ಮುಖ್ಯಮಂತ್ರಿ ಬರ್ತಾರೆ. ನಾನು ಬರಿ ಟ್ರಯಲ್ ರನ್‌ಗೆ ಚಾಲನೆ ನೀಡಲು ಬಂದಿದ್ದೇನೆ ಅಷ್ಟೇ ಎಂದರು.

ನಂತರ ಪ್ರಾಯೋಗಿಕವಾಗಿ ಹರಿಯುತ್ತಿರುವ ನೀರಿಗೆ ಬಾಗಿನ ಅರ್ಪಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಂಸದ ಶ್ರೇಯಸ್‌ಪಟೇಲ್, ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು, ಶರತ್ ಬಚ್ಚೇಗೌಡ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಸಾಥ್ ನೀಡಿದರು.

ಎತ್ತಿನಹೊಳೆ ಯೋಜನೆ ಮುಖ್ಯ ಇಂಜಿನಿಯರ್ ಸಣ್ಣಚಿತ್ತಯ್ಯ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ ಮಹಮದ್ ಸುಜೀತಾ ಮುಂತಾದವರು ಇದ್ದರು.

error: Content is protected !!