0.9 C
Munich
Home News ಚನ್ನರಾಯಪಟ್ಟಣ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರ ಕ್ಲೀನ್ ಸ್ವೀಪ್- ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದನೆ

ಚನ್ನರಾಯಪಟ್ಟಣ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರ ಕ್ಲೀನ್ ಸ್ವೀಪ್- ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದನೆ

Constituency MLA C.N. Balakrishna congratulated all 14 new directors after JDS-backed directors won all the seats in the TAPCMS elections held on Sunday.

ಚನ್ನರಾಯಪಟ್ಟಣ: ಟಿಎಪಿಸಿಎಂಎಸ್ ಗೆ ಭಾನುವಾರದಂದು ನಡೆದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲಿಯೂ ಜೆಡಿಎಸ್ ಬೆಂಬಲಿತ ನಿರ್ದೇಶಕರು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣರವರು ಎಲ್ಲ 14ಮಂದಿ ನೂತನ ನಿರ್ದೇಶಕರನ್ನು ಅಭಿನಂದಿಸಿದರು.

ಚನ್ನರಾಯಪಟ್ಟಣ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ 14 ನಿರ್ದೇಶಕರ ಸ್ಥಾನದ ಪೈಕಿ ಬಿ-ತರಗತಿಯಡಿಯ 7ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಗೆದ್ದ ನೂತನ ನಿರ್ದೇಶಕರುಗಳು. ಎಸ್‌ಟಿ ಮೀಸಲಾತಿಯಡಿ ಅವಿರೋಧವಾಗಿ ಆಯ್ಕೆಯಾದ ಓರ್ವ ನಿರ್ದೇಶಕ ಮತ್ತು ಎ-ತರಗತಿಯಡಿ ಅವಿರೋಧವಾಗಿ ಆಯ್ಕೆಯಾಗಿದ್ದ 6ನಿರ್ದೇಶಕರುಗಳನ್ನು ಸಂಘದ ಕಛೇರಿಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಟಿಎಪಿಸಿಎಂಎಸ್‌ನ ಅಧಿಕಾರ ಚುಕ್ಕಾಣಿ ಹಿಡಿದ ಜೆಡಿಎಸ್ ಪಕ್ಷವು ಸಂಘ ಮತ್ತು ರೈತರ ಹಿತ ಕಾಯುವ ಕೆಲಸ ಮಾಡಿದೆ. ಷೇರುದಾರ ರೈತರು ನಮ್ಮ ಪಕ್ಷದ ಮೇಲೆ ನಂಬಿಕೆಯಿಟ್ಟು ಎಲ್ಲ 14ಸ್ಥಾನಗಳಲ್ಲಿಯೂ ಜೆಡಿಎಸ್ ಬೆಂಬಲಿತರ ಆಯ್ಕೆಗೆ ಸಹಕಾರ ನೀಡಿದ್ದಾರೆ.

ಅವರ ನಂಬಿಕೆಯನ್ನು ನಮ್ಮ ನಿರ್ದೇಶಕರು ಉಳಿಸಿಕೊಳ್ಳುವ ಕೆಲಸ ಮಾಡಲಿದ್ದಾರೆ. ಸಾಲದಲ್ಲಿ ಮುಳಗಿದ್ದ ಟಿಎಪಿಸಿಎಂಎಸ್ ಇದೀಗ 60 ಲಕ್ಷ ರೂ.ಗಳ ಠೇವಣಿ ಹೊಂದಿ, 1.5ಕೋಟಿ ರೂ.ಗಳ ದುಡಿಯುವ ಬಂಡವಾಳ ಹೊಂದಿದೆ. ಸಂಘಕ್ಕೆ ಸುಸಜ್ಜೀತವಾದ ಕಟ್ಟಡವನ್ನು ಹೊಂದುವ ಜೊತೆಗೆ 2.5ಕೋಟಿ ರೂ.ಗಳ ಆಸ್ತಿ ಹೊಂದಿ ರೈತರ ಏಳ್ಗೆಗಾಗಿ ಕೆಲಸ ಮಾಡುತ್ತಿದೆ ಎಂದರು.

ಪಟ್ಟಣದ ಮೈಸೂರು ರಸ್ತೆಯಲ್ಲಿನ ಅಂಬೇಡ್ಕರ್ ವೃತ್ತದ ಬಳಿಯಿರುವ ವಾಣಿಜ್ಯ ಸಂಕೀರ್ಣದ ಹಿಂಭಾಗವಿರುವ ಜಾಗದಲ್ಲಿ ಕಲ್ಯಾಣಮಂಟಪ ನಿರ್ಮಿಸಿ ಅರ್ಥಿಕ ಹೊರೆಯಾಗದ ರೀತಿಯಲ್ಲಿ ಕಡಿಮೆ ಬಾಡಿಗೆ ದರದಲ್ಲಿ ಜನತೆಗೆ ಅವಕಾಶ ಮಾಡುವ ಸಂಕಲ್ಪ ಹೊಂದಲಾಗಿದೆ. ಗೊಬ್ಬರ ಮಾರಾಟದಲ್ಲಿ ವಾರ್ಷಿಕ 5 ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ. ಎಲ್ಲ ನಿರ್ದೇಶಕರ ಪರಿಶ್ರಮ, ತಮ್ಮ ಮಾರ್ಗದರ್ಶನದ ಫಲವಾಗಿ ಸಹಕಾರಿ ಕ್ಷೇತ್ರ ಸದೃಡವಾಗಿ ಬೆಳೆಯಲು ಕಾರಣವಾಗಿದೆ ಎಂದರು.

ತಾವು ಮಾಡಿದ ಸೇವೆಯನ್ನು ಪರಿಗಣಿಸಿ ಮತದಾರರು 7ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಬದ್ಧತೆ ತೋರಿದ್ದಾರೆ ಅವರ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ವಿರೋಧಿಗಳ ಟೀಕೆ, ಟಿಪ್ಪಣೆಗಳಿಗೆ ಕಿವಿಗೊಡದೇ ತಾಲ್ಲೂಕಿನ ರೈತರನ್ನು ಉಳಿಸುವ ನಿಟ್ಟಿನಲ್ಲಿ ನೀರಾವರಿ, ಶಿಕ್ಷಣ, ಕಲೆ, ಸಾರಿಗೆ, ಆರೋಗ್ಯ ಕ್ಷೇತ್ರಗಳಲ್ಲಿ ಅನುದಾನದ ಕೊರತೆಯ ನಡುವೆಯೂ ಕೆಲಸ ಮಾಡಿಕೊಂಡು ಬರಲಾಗುತ್ತಿದೆ ಎಂದ ಅವರು, ಟಿಎಪಿಸಿಎಂಎಸ್‌ನ ಕಟ್ಟಡದ ಮುಂಭಾಗದ ಆವರಣಕ್ಕೆ ಶೀಘ್ರದಲ್ಲೆ ಅನುದಾನ ಒದಗಿಸಿ ಕಾಂಕ್ರೀಟಿಕರಣಗೊಳಿಸಲಾಗುವುದು ಎಂದರು.

ಟಿಎಪಿಸಿಎಂಎಸ್ ನ ಅಧ್ಯಕ್ಷ, ಹಾಗೂ ಸತತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಎಂ.ಆರ್.ಅನಿಲ್‌ಕುಮಾರ್ ಮಾತನಾಡಿ, ನಮ್ಮ ಶಾಸಕರ ಸೂಚನೆಯಂತೆ ನಮ್ಮ ಎಲ್ಲ ನಿರ್ದೇಶಕರನ್ನು ಷೇರುದಾರ ಸದಸ್ಯರು ಅತ್ಯಧಿಕ ಬಹುಮತದೊಂದಿಗೆ ಗೆಲ್ಲಿಸಿದ್ದು, ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವು ಮಾಡಬೇಕಾಗಿದೆ. ಶಾಸಕ ಬಾಲಕೃಷ್ಣರ ಮಾರ್ಗದರ್ಶನದಲ್ಲಿ ಮತ್ತು ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡರ ಸಲಹೆ ಪಡೆದು ಉತ್ತಮ ಸಂಘ ಕಟ್ಟುವಲ್ಲಿ ನಾವೆಲ್ಲ ಬದ್ಧರಾಗೋಣವೆಂದರು.

ಈ ವೇಳೆ ಎ-ತರಗತಿಯಡಿ ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರುಗಳಾದ ಸಿ.ಎನ್.ಪುಟ್ಟಸ್ವಾಮೀಗೌಡ, ಎಂ.ಎನ್.ಬೋರೆಗೌಡ, ಎನ್.ಕೃಷ್ಣೇಗೌಡ, ಹೆಚ್.ಆರ್.ವೆಂಕಟೇಶಮೂರ್ತಿ, ಕೆ.ಎನ್.ನಾಗರಾಜು, ನಾಗರಾಜು, ಹಾಗೂ ಬಿ-ತರಗಯತಿಯಡಿ ಚುನಾವಣೆಯಲ್ಲಿ ಗೆದ್ದ ಎಂ.ಆರ್.ಅನಿಲ್‌ಕುಮಾರ್, ಟಿ.ಎನ್.ನಂಜುಂಡೇಗೌಡ ತರಬೇನಹಳ್ಳಿ, ತಾರಾಮಣಿ ಆನಂದ್, ಮಮತ ಜಯಣ್ಣ, ರಮೇಶ್ ಕುಂಬಾರಹಳ್ಳಿ, ಸಿ.ಜಿ.ಜಗದೀಶ್, ರವಿಕುಮಾರ್ ಕುಂಬಾರಹಳ್ಳಿ, ಹಾಗೂ ಅವಿರೋಧವಾಗಿ ಆಯ್ಕೆಯಾದ ಪಿ.ಉಮೇಶ್‌ರವರನ್ನು ಅಭಿನಂದಿಸಲಾಯಿತ್ತು. ಈ ವೇಳೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನೂತನ ನಿರ್ದೇಶಕರಿಗೆ ಶುಭಕೋರಿದರು.

error: Content is protected !!