5.9 C
Munich
Home News ಹಾಸನ: ಹಾಸನಾಂಬ ಜಾತ್ರೆಯ ಅಂಗವಾಗಿ ನಡೆದ ಶ್ವಾನ ಪ್ರದರ್ಶನ ಪ್ರೇಕ್ಷಕರ ಮನ ಗೆದ್ದಿತು

ಹಾಸನ: ಹಾಸನಾಂಬ ಜಾತ್ರೆಯ ಅಂಗವಾಗಿ ನಡೆದ ಶ್ವಾನ ಪ್ರದರ್ಶನ ಪ್ರೇಕ್ಷಕರ ಮನ ಗೆದ್ದಿತು

A special dog show was organized on Sunday as part of the Sri Hassanamba Devi and Sri Siddeshwara Swamy Jatra Mahotsava by the Animal Husbandry and Veterinary Services Department at the Government Science College premises near Salagame Road in the city.

ಹಾಸನ: ನಗರದ ಸಾಲಗಾಮೆ ರಸ್ತೆ ಬಳಿಯ ಸರಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ವಿಶೇಷ ಶ್ವಾನ ಪ್ರದರ್ಶನ ಆಯೋಜಿಸಲಾಯಿತು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸ್ಥಳೀಯರು ಹಾಗೂ ದೂರದಿಂದ ಬಂದ ನೂರಾರು ಜನ ಪ್ರೇಕ್ಷಕರು ಭಾಗವಹಿಸಿ ನಾಯಿಗಳ ಪ್ರತಿಭೆ, ಶಿಸ್ತು ಮತ್ತು ಶೈಲಿಯನ್ನು ಕಣ್ತುಂಬಿಕೊಂಡರು.

ಕಾರ್ಯಕ್ರಮ ಆರಂಭದಲ್ಲಿ ಹಾಸನ ಪೊಲೀಸ್ ಇಲಾಖೆಯ ತರಬೇತಿ ಪಡೆದ ಲಾಸಿ ನಾಯಿ ಪ್ರಥಮ ಪ್ರದರ್ಶನ ನೀಡಿತು. ಅದರ ಚುರುಕುತನ, ಆಜ್ಞೆ ಪಾಲನೆ ಹಾಗೂ ನೈಪುಣ್ಯ ಮೆಚ್ಚುಗೆಗೆ ಪಾತ್ರವಾಯಿತು. ಇದರ ಬಳಿಕ ಸ್ಪರ್ಧೆಯಲ್ಲಿ ಪಾಲ್ಗೊಂಡ ಸುಮಾರು 80ಕ್ಕೂ ಹೆಚ್ಚು ವಿವಿಧ ತಳಿಯ ನಾಯಿಗಳು ಲ್ಯಾಬ್ರಡಾರ್, ಜರ್ಮನ್ ಶೆಪರ್ಡ್, ಡೋಬರ್ಮಾನ್, ಪೊಮೆರೇನಿಯನ್, ರಾಟ್‌ವೈಲರ್, ಹಸ್ಕಿ ಹಾಗೂ ಭಾರತೀಯ ತಳಿಯ ನಾಯಿಗಳು ತಮ್ಮ ಮಾಲೀಕರ ಮಾರ್ಗದರ್ಶನದಲ್ಲಿ ಪ್ರದರ್ಶನ ನೀಡಿದವು.

ನಾಯಿಗಳ ಆರೈಕೆ, ಶಿಸ್ತು, ನಡವಳಿಕೆ, ಮೈಕಟ್ಟು ಮತ್ತು ಪ್ರದರ್ಶನ ಶೈಲಿಯ ಆಧಾರದ ಮೇಲೆ ನ್ಯಾಯಾಧೀಶರು ಮೌಲ್ಯಮಾಪನ ನಡೆಸಿದರು. ಶ್ವಾನ ಪ್ರೇಮಿಗಳು ತಮ್ಮ ಪಾಳುಪ್ರಾಣಿಗಳನ್ನು ಸಿಂಗಾರಿಸಿ, ಅವರಿಗೆ ವಿಭಿನ್ನ ರೀತಿಯ ತರಬೇತಿ ನೀಡಿದ ರೀತಿ ನೋಡುಗರ ಮನಗೆದ್ದಿತು. ಕೆಲವು ಮಕ್ಕಳು ನಾಯಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಹರ್ಷದ ದೃಶ್ಯವೂ ಕಂಡುಬಂತು.

ಕಾರ್ಯಕ್ರಮದ ಅಂತ್ಯದಲ್ಲಿ ವಿಜೇತ ನಾಯಿಗಳ ಮಾಲೀಕರಿಗೆ ನಗದು ಪ್ರಶಸ್ತಿ ಪತ್ರಗಳು ಹಾಗೂ ಟ್ರೋಫಿಗಳನ್ನು ವಿತರಿಸಲಾಯಿತು. ಪಶುವೈದ್ಯಾಧಿಕಾರಿ ಡಾ. ಶಂಕರ, ಡಾ. ನಾಗರಾಜು ಹಾಗೂ ತಾಲೂಕು ಪಶುಪಾಲನಾ ಅಧಿಕಾರಿ ರಾಮಚಂದ್ರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಶ್ವಾನ ಪ್ರೇಮಿಗಳಿಗೆ ಸಿಕ್ಕಿದ ಈ ದೃಶ್ಯಾವಳಿ ಹಾಸನಾಂಬ ಜಾತ್ರೆಯ ಮತ್ತೊಂದು ಆಕರ್ಷಣೆಯಾಗಿ ಪರಿಣಮಿಸಿತು.

error: Content is protected !!