ಚನ್ನರಾಯಪಟ್ಟಣ : ಪೂಮಡಿಹಳ್ಲಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಪಿ.ಕೆ.ನಾಗರಾಜು ಉಪಾಧ್ಯಕ್ಷರಾಗಿ ಮಂಜಪ್ಪ ಅವಿರೋಧವಾಗಿ ಆಯ್ಕೆ

ಚನ್ನರಾಯಪಟ್ಟಣ : ತಾಲೂಕಿನ ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಮಡಿಹಳ್ಲಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಪಿ.ಕೆ.ನಾಗರಾಜು ಉಪಾಧ್ಯಕ್ಷರಾಗಿ ಬೇಡರಹಳ್ಳಿಯ ಮಂಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈಚೆಗೆ ಈ ಸಂಘಕ್ಕೆ ನಡೆದ ಚುನಾವಣೆಯಲ್ಲಿ 11 ನಿರ್ದೇಶಕರುಗಳು ಆಯ್ಕೆಯಾಗಿದ್ದರು. ಶುಕ್ರವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಪಿ.ಕೆ.ನಾಗರಾಜು ಮತ್ತು ಬೇಡರಹಳ್ಳಿಯ ಮಂಜಪ್ಪ ಹೊರತುಪಡಿಸಿ ಮತ್ಯಾರೂನಾಮ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಶಕುಂತಲಾ ಘೋಷಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಸಿ.ಎನ್.ಬಾಲಕೃಷ್ಣ ನೂತನ ಆಡಳಿತ ಮಂಡಳಿಯವರನ್ನು ಅಭಿನಂದಿಸಿ ಮಾತನಾಡಿ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಡೆದ ಕೃಷಿ ಸಾಲವನ್ನು ಬೇರೆ ಯಾವುದೇ ತರಹದ ಉದ್ದೇಶಗಳಿಗೆ ಬಳಸಿಕೊಳ್ಳದೇ ಬೆಳೆಗಾಗಿಯೇ ಉಪಯೋಗಿಸಿಕೊಳ್ಳಿ ಎಂದು ಸಲಹೆ ನೀಡಿದರು. ಕೃಷಿಗೆ ಪಡೆದ ಬೆಳೆ ಸಾಲವನ್ನು ಸಕಾಲದಲ್ಲಿ ಮರು ಪಾವತಿಸುವುದರಿಂದ ಹೊಸ ಸಾಲ ಅಪೇಕ್ಷಿಸುವ ರೈತರಿಗೂ ವಿತರಿಸಲು ಅನುಕೂಲವಾಗುತ್ತದೆ ಎಂದರು.

ನಿರ್ದೇಶಕರುಗಳಾದ ಬಸವರಾಜು ಪ್ರಭು, ಸ್ನೇಹಜೀವಿ ಮಂಜು ಗಣೇಶ, ನಿಖಿಲ್ ಬೋರೇಗೌಡ, ಕೃಷ್ಣೇಗೌಡ, ಶಕುಂತಲಾ ಮಲ್ಲೇಶ್, ಶಾಂತ ಪುಟ್ಟಸ್ವಾಮಿ, ರಾಜಶೇಖರ್, ಮುಖಂಡರುಗಳಾದ ದೇವರಾಜೇಗೌಡ, ಪಿ.ಕೆ.ಮಂಜೇಗೌಡ, ದೊಡ್ಡೇಗೌಡ, ಬೋರೇಗೌಡ, ದಾಸರಹಳ್ಳಿ ರಂಗೇಗೌಡ, ಎಂ.ಪಿ.ಪ್ರಸನ್ನಕುಮಾರ್, ಶ್ರೀನಿವಾಸ, ಎ.ಟಿ.ದೇವರಾಜು, ವಾಸು, ರಮೇಶ್, ಅರುಣ್, ಶಿವಣ್ಣ, ಸುನೀಲ್, ಯೋಗೇಶ್, ನಾಗೇಶ್, ಪ್ರಭಾಕರ್, ಬಾಬು, ಧರಣೇಶ್, ಸಿಇಒ ಪ್ರಕಾಶ್, ಮೇಲ್ವಚಾರಕ ಮಧು ಪಾಲ್ಗೊಂಡಿದ್ದರು.