ಹಾಸನ: ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಕಾಫಿ ಕಳವು ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಬೇಲೂರು ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಮತ್ತೊಂದು ಕಳವು ಘಟನೆ ಬೆಳಕಿಗೆ ಬಂದಿದೆ.
ಮಧು ಎಂಬುವವರಿಗೆ ಸೇರಿದ ಕಾಫಿ ಫಸಲು ಕಳ್ಳರ ಗುರಿಯಾಗಿದ್ದು, ತೋಟದಲ್ಲಿ ಬಿಡಿಸಿದ ಇಪ್ಪತ್ತು ಮೂಟೆ ಕಾಫಿ ಹಣ್ಣುಗಳನ್ನು ಕಳ್ಳರು ಕದ್ದೊಯ್ದಿರುವುದು ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕಾಫಿ ಹಣ್ಣು ಬಿಡಿಸಿ, ಟಾರ್ಪಾಲ್ ಮುಚ್ಚಿ ಮನೆಗೆ ಹೋದ ಮಧು ಅವರು ಬೆಳಿಗ್ಗೆ ಒಣಗಿಸಲು ಬಂದಾಗ ಟಾರ್ಪಲ್ ತರೆದುಕೊಂಡಿರುವುದು ಗಮನಕ್ಕೆ ಬಂದಿದೆ.
ಕಳವಾಗಿರುವ ಕಾಫಿಯ ಮೌಲ್ಯ ಸುಮಾರು ಒಂದು ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಫಿಗೆ ಉತ್ತಮ ಬೆಲೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಕಳವು ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ಸ್ಥಳೀಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಬೇಲೂರು ತಾಲ್ಲೂಕಿನಲ್ಲೇ ಇದು ಎಂಟನೇ ಕಾಫಿ ಕಳವು ಪ್ರಕರಣವಾಗಿದ್ದು, ರೈತರಲ್ಲಿ ಭದ್ರತೆ ಕುರಿತು ಗಂಭೀರ ಚಿಂತೆ ಉಂಟಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
cases-of-coffee-theft-are-increasing-at-an-alarming-rate-in-the-malnad-region-and-another-theft-incident-has-come-to-light-in-chinnenahalli-v









