ಬೆಂಗಳೂರು : ನಿನಗೆ ಒರಗಿಕೊಳ್ಳಲು ರಘು ತೊಡೆ ಬೇಕು’ ಎಂದ ಅಶ್ವಿನಿ ಗೌಡ.. ರಾಶಿಕಾ ಫ್ಯಾನ್ಸ್ ಆಕ್ರೋಶ

ಬೆಂಗಳೂರು : ಬಿಗ್ ಬಾಸ್ ಮನೆಯೊಳಗೆ ನಿನ್ನೆ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ವಿಶೇಷ ಚಟುವಟಿಕೆ ನೀಡಿದರು. ಎದುರಾಳಿ ಸ್ಪರ್ಧಿಗಳಿಗೆ ಮನಸ್ಸಿನಲ್ಲಿ ಇದ್ದ ಮಾತುಗಳನ್ನು ನೇರವಾಗಿ, ‘ಮುಖಕ್ಕೆ ಹೊಡೆದಂತೆ’ ಹೇಳಬೇಕು ಎಂಬುದೇ ಈ ಟಾಸ್ಕ್‌ನ ಉದ್ದೇಶ. ಮನೆಯೊಳಗೆ ನೇತು ಹಾಕಿದ್ದ ಸ್ಪರ್ಧಿಗಳ ಭಾವಚಿತ್ರಕ್ಕೆ ಪಂಚ್ ಮಾಡಿ ಮಾತನಾಡುವಂತೆ ಕಿಚ್ಚ ಸೂಚನೆ ನೀಡಿದ್ದರು.

ಈ ಚಟುವಟಿಕೆಯ ವೇಳೆ ಅಶ್ವಿನಿ ಗೌಡ, ರಾಶಿಕಾ ವಿರುದ್ಧ ಆಡಿದ ಮಾತುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

ಅಶ್ವಿನಿ ಗೌಡ ಹೇಳಿದ್ದೇನು ಎಂದರೆ

“ಬಿಗ್ ಬಾಸ್ ಸೀಸನ್ 12ರಲ್ಲಿ ನೀನು ನಿನ್ನನ್ನೇ ‘ಮಿಸ್ ಯುನಿವರ್ಸ್’ ಅಂತ್ಕೊಂಡಿದ್ದೀಯ. ನಿನ್ನ ವಯಸ್ಸಿಗೂ, ನನ್ನ ವಯಸ್ಸಿಗೂ ತುಂಬಾ ಅಂತರ ಇದೆ ಅನ್ನೋದನ್ನ ನೀನೇ ಹೇಳಿಕೊಂಡಿದ್ದೆ. ಮನೆಯಲ್ಲಿರುವ ಎಲ್ಲಾ ಹೆಣ್ಣುಮಕ್ಕಳಿಗಿಂತ ನಾನೇ ಸ್ಟ್ರಾಂಗ್ ಅಂತ ನೀನು ಹೇಳುತ್ತಿದ್ದೆ. ಆದರೆ ಹಿಂದಿನ ಆಟದಲ್ಲೇ ನಿನಗಿಂತ ನಾನು ಸ್ಟ್ರಾಂಗ್ ಅಂತ ಪ್ರೂವ್ ಮಾಡಿದ್ದೀನಿ.

ನಿನ್ನಂತಿಲ್ಲ, ಬಿಗ್ ಬಾಸ್ ಮನೆಯೊಳಗೆ ಒಂದೊಂದು ಟ್ರ್ಯಾಕ್ ಶುರು ಮಾಡ್ಕೊಂಡು ನಾನು ಆಟ ಆಡಿಲ್ಲ. ನಿನಗೆ ನಿಯತ್ತು ಇಲ್ಲ ಅನ್ನೋದಕ್ಕೆ ಸೂರಜ್ ಇದ್ನಲ್ಲ—ಅವನೇ ದೊಡ್ಡ ಉದಾಹರಣೆ.

ಗಿಲ್ಲಿಗೆ ನಾನು ರಿಕ್ವೆಸ್ಟ್ ಮಾಡಿಕೊಂಡಿದ್ದು ನಿಜ. ‘ಮಾಡಲ್ಲ’ ಅನ್ನೋ ಪದವನ್ನು ನಾನು ಬಳಸಿಲ್ಲ. ಏಕವಚನ ಪದ ಬಳಕೆ ಮಾಡಿದ್ದು ಗಿಲ್ಲಿನೇ.

ಇದೇ ಟಿಕೆಟ್ ಟು ಫಿನಾಲೆ. ಲಾಸ್ಟ್ ಕ್ಯಾಪ್ಟನ್ ಆಫ್ ದಿ ಹೌಸ್ ಆಗಿದ್ದಾಗ, ನೀನು ಉಸ್ತುವಾರಿಯಾಗಿ ನಿನ್ನ ಯೋಗ್ಯತೆಯನ್ನು ಹೇಗೆ ತೋರಿಸಿದ್ದೆ ಅನ್ನೋದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ನೀನು ಜವಾಬ್ದಾರಿಯಾಗಿ ಕೆಲಸ ಮಾಡಿದ್ದರೆ, ನಾನು ಇವತ್ತು ಈ ಮನೆಯ ಕ್ಯಾಪ್ಟನ್ ಆಗಿರುತ್ತಿದ್ದೆ.

ನಿನಗೆ ಒರಗಿಕೊಳ್ಳೋಕೆ ರಘು ಅವರ ತೊಡೆ ಬೇಕು, ಹೆಗಲು ಬೇಕು. ನನಗೆ ಆ ಅವಶ್ಯಕತೆ ಇಲ್ಲ. ನಾನು ಇತರರಿಗೆ ಹೆಗಲಾಗಿ ನಿಲ್ಲುವವಳು. ಯೂ ಆರ್ ನಥಿಂಗ್ ಇನ್ ಫ್ರಂಟ್ ಆಫ್ ಮೀ.”