ಬೆಂಗಳೂರು: ಬಿಗ್ ಬಾಸ್ ಶೋ ಅಂತಿಮ ಹಂತಕ್ಕೆ ತಲುಪುತ್ತಿದ್ದು, ಮಿಡ್ ವೀಕ್ ಎಲಿಮಿನೇಷನ್ ಟೆನ್ಷನ್ ನಡುವೆ ಸ್ಪರ್ಧಿಗಳ ಮನದಾಸೆಗಳನ್ನು ಈಡೇರಿಸಲು ಬಿಗ್ ಬಾಸ್ ಮುಂದಾಗಿದ್ದಾರೆ. ‘ನಿಮ್ಮ ಯಾವ ಆಸೆ ಈಡೇರಬೇಕು?’ ಎಂದು ಈಗಾಗಲೇ ಬಿಗ್ ಬಾಸ್ ಪ್ರಶ್ನಿಸಿ, ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಮೂರು ಕನಸುಗಳನ್ನು ಪತ್ರದಲ್ಲಿ ಬರೆದು ನೀಡುವಂತೆ ಸೂಚಿಸಿದ್ದರು. ಅವುಗಳಲ್ಲಿ ಒಂದನ್ನು ಬಿಗ್ ಬಾಸ್ ಈಡೇರಿಸುವುದಾಗಿ ತಿಳಿಸಿದ್ದಾರೆ.
ನಿನ್ನೆ ಎಲ್ಲಾ ಸ್ಪರ್ಧಿಗಳು ತಮ್ಮ ಆಸೆಗಳನ್ನು ಪತ್ರದ ಮೂಲಕ ಬರೆದು, ಕ್ಯಾಮೆರಾ ಮುಂದೆ ಓದಿ ತಿಳಿಸಿದರು. ಈ ಪೈಕಿ ಗಿಲ್ಲಿ ನಟನ ಮೂರು ಆಸೆಗಳು ವಿಶೇಷ ಗಮನ ಸೆಳೆದಿವೆ.
ಗಿಲ್ಲಿಯ ಆಸೆಗಳು..!
ಬಿಗ್ ಬಾಸ್ ಮನೆಯ ಟಿವಿಯಲ್ಲಿ ಒಂದೊಳ್ಳೆ ಸಿನಿಮಾ ನೋಡಬೇಕು , ಬಿಗ್ ಬಾಸ್ ಮನೆಯಲ್ಲಿರುವ ಆನೆಯ ಮೇಲೆ ಒಮ್ಮೆ ಕುಳಿತುಕೊಳ್ಳಬೇಕು , ‘ನಲಿ ಮೂಳೆ’ ನನಗೆ ತುಂಬಾ ಇಷ್ಟ. ಅದನ್ನು ಹೊಟ್ಟೆ ತುಂಬಾ ತಿನ್ನಬೇಕು. ತಿಂದ ನಂತರ ಒಂದು ಗಂಟೆ ಮಲಗಲು ಅವಕಾಶ ಕೊಡಬೇಕು. ಮಲಗಿರುವಾಗ ನಾಯಿ ಬೊಗಳುವ ಸೌಂಡ್ ಬರಬಾರದು ಎಂಬ ಬೇಡಿಕೆಯನ್ನು ಕೂಡ ಗಿಲ್ಲಿ ಇಟ್ಟಿದ್ದಾರೆ.










