ಬೆಂಗಳೂರು:ರಾಷ್ಟ್ರೀಯ ಜೀವನೋಪಾಯ ಅಭಿಯಾನ (NRLM & NULM) ಅಡಿಯಲ್ಲಿ ಅತ್ಯುತ್ತಮ ಸಾಧನೆಗೈದ ರಾಜ್ಯದ ಎಂಟು ಜಿಲ್ಲೆಗಳ ಸ್ವ-ಸಹಾಯ ಗುಂಪುಗಳ ಸದಸ್ಯರನ್ನು “ಬೆಂಗಳೂರು ಕೌಶಲ್ಯ ಶೃಂಗಸಭೆ–2025” ಪ್ರಶಸ್ತಿಯಿಂದ ಗೌರವಿಸಲಾಯಿತು.
ಬೆಂಗಳೂರು ಲಲಿತ ಅಶೋಕ್ ಹೋಟೆಲ್‌ನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ ಈ ಶೃಂಗಸಭೆಯನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಚಿವ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಅವರು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ವಿವಿಧ ಅಂಗ ಸಂಸ್ಥೆಗಳ ಅತ್ಯುತ್ತಮ ಕಾರ್ಯಕ್ಕೆ ನೀಡಲಾಗುವ ಈ ಪ್ರಶಸ್ತಿಯಲ್ಲಿ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಅಡಿಯಲ್ಲಿ ಕಾರ್ಯನಿರ್ವಹಿಸಿರುವ ಎಂಟು ಮಹಿಳಾ ಸ್ವಸಹಾಯ ಸಂಘಗಳು ರಾಜ್ಯ ಮಟ್ಟದ ಗೌರವಕ್ಕೆ ಪಾತ್ರವಾದವು.
ಪ್ರಶಸ್ತಿ ವಿಜೇತ ಸಂಘಗಳು ಹೀಗಿವೆ —
- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕು, ಬಾವಿಕೆರೆ ಗ್ರಾಮ ಪಂಚಾಯತಿ:
ಸ್ಫೂರ್ತಿ ಸಂಜೀವಿನಿ ಗ್ರಾಮ ಪಂಚಾಯತಿ ಒಕ್ಕೂಟದ “ಹಿರಿಹೊನ್ನಪ್ಪ ವಿಕಾಸ ಮಹಿಳಾ ಸ್ವಸಹಾಯ ಸಂಘ” - ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು, ಗೋಳ್ತಮಜಲು:
ಆಶೀರ್ವಾದ ಸಂಜೀವಿನಿ ಒಕ್ಕೂಟದ “ಶ್ರೀ ಸಿದ್ಧಿವಿನಾಯಕ ಮಹಿಳಾ ಸ್ವಸಹಾಯ ಸಂಘ” - ಕಲಬುರಗಿ ಜಿಲ್ಲೆಯ ಅಳಂದ ತಾಲ್ಲೂಕು, ಗುಂಜ ಬಬಲಾದ ಗ್ರಾಮ ಪಂಚಾಯತಿ:
ಗಂಗಾ ಪರಮೇಶ್ವರಿ ಒಕ್ಕೂಟದ “ಚೆನ್ನಮ್ಮ ಸ್ವಸಹಾಯ ಸಂಘ” - ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು, ವಿವಿಪುರ ಗ್ರಾಮ ಪಂಚಾಯತಿ:
ಝಾನ್ಸಿರಾಣಿ ಮಹಿಳಾ ಒಕ್ಕೂಟದ “ಶ್ರೀರಾಮ ಆತ್ಮ ಮಹಿಳಾ ಆಹಾರ ಭದ್ರತಾ ಗುಂಪು” - ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕು, ನಡವಿ ಗ್ರಾಮ ಪಂಚಾಯತಿ:
ಶ್ರೀರಾಮಲಿಂಗೇಶ್ವರಿ ಸಂಜೀವಿನಿ ಮಹಿಳಾ ಒಕ್ಕೂಟದ “ತಾಯಮ್ಮದೇವಿ ಸ್ವಸಹಾಯ ಸಂಘ” - ಶಿವಮೊಗ್ಗ ಮಹಾನಗರ ಪಾಲಿಕೆ:
ಶ್ರೀದುರ್ಗಾ ಪ್ರದೇಶ ಒಕ್ಕೂಟದ “ದಿವ್ಯಜ್ಯೋತಿ ನಿರಂತರ ಉಳಿತಾಯ ಗುಂಪು” - ಬೆಂಗಳೂರು ನಗರ ಜಿಲ್ಲೆಯ ಪಶ್ಚಿಮ ನಗರ ಪಾಲಿಕೆ, ಬಿಬಿಎಂಪಿ ವ್ಯಾಪ್ತಿ:
ಸರೋಜಿನಿ ನಾಯ್ಡು ಪ್ರದೇಶ ಒಕ್ಕೂಟದ “ಅನ್ನಪೂರ್ಣೇಶ್ವರಿ ಮಹಿಳಾ ಸ್ವಸಹಾಯ ಸಂಘ” - ರಾಯಚೂರು ಮಹಾನಗರ ಪಾಲಿಕೆ:
ಗಣೇಶ ಪ್ರದೇಶ ಒಕ್ಕೂಟದ “ಅಕ್ಕಮಹಾದೇವಿ ಮಹಿಳಾ ಸ್ವಸಹಾಯ ಸಂಘ”
ಈ ಎಲ್ಲ ಸಂಘಗಳು ಮಹಿಳಾ ಸಬಲೀಕರಣ, ಉದ್ಯಮಶೀಲತೆ ಮತ್ತು ಜೀವನೋಪಾಯ ವೃದ್ಧಿಯಲ್ಲಿ ತೋರಿದ ಶ್ರೇಷ್ಠ ಕಾರ್ಯಕ್ಕಾಗಿ ರಾಜ್ಯ ಮಟ್ಟದಲ್ಲಿ ಪ್ರಶಂಸಿಸಲ್ಪಟ್ಟವು.
ಕಾರ್ಯಕ್ರಮದಲ್ಲಿ ಶಿವಕಾಂತಮ್ಮ ನಾಯಕ, ಅಧ್ಯಕ್ಷೆ — ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ,
ಡಾ. ಇ.ವಿ. ರಮಣರೆಡ್ಡಿ, ಅಧ್ಯಕ್ಷ — ಕೆಎಸ್‌ಡಿಎ,
ಶ್ರೀನಿವಾಸ್ ಎಂ, ಅಪರ ಅಭಿಯಾನ ನಿರ್ದೇಶಕರು (ಸಂಜೀವಿನಿ–ಕೆಎಸ್‌ಆರ್‌ಎಲ್‌ಪಿಎಸ್) ಹಾಗೂ
ವಿವಿಧ ಇಲಾಖೆಗಳ ಗಣ್ಯರು ಉಪಸ್ಥಿತರಿದ್ದರು.










