ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಆಯೋಜಿಸಿದ್ದ ಎರಡನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ. ಮಕ್ಕಳ ಚಿತ್ರಕ್ಕೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಈ ಚಿತ್ರೋತ್ಸವ ಆಯೋಜನೆ ಮಾಡಲಾಗುತ್ತದೆ. ಈ ಬಾರಿ ಒಟ್ಟು 9 ಸಿನಿಮಾಗಳ ಪ್ರದರ್ಶನ ನಡೆದಿದೆ. ಆಯ್ದ ಮಕ್ಕಳ ಸಿನಿಮಾಗಳಿಗೆ 18 ಬೇರೆ ಬೇರೆ ವಿಭಾಗದಲ್ಲಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಪಡೆದ ಸಿನಿಮಾ ಯಾವುದು? | ವಿನ್ನರ್ – ಪಪ್ಪಿ ಸಿನಿಮಾ, 1st ರನ್ನರ್ ಅಪ್ – ಕರಡಿಗುಡ್ಡ ಸಿನಿಮಾ, 2nd ರನ್ನರ್ ಅಪ್ – ಬಾಲ್ಯ ಸಿನಿಮಾ | ಅತ್ಯುತ್ತಮ ಬಾಲ ಕಲಾವಿದ – ವರುಣ್ ಗಂಗಾಧರ್ (ಸ್ವರಾಜ್ಯ) | ಅತ್ಯುತ್ತಮ ಬಾಲ ಕಲಾವಿದೆ – ಋತು (ಟೇಕ್ವಾಂಡೋ ಗರ್ಲ್) | ಅತ್ಯುತ್ತಮ ಬಾಲ ಕಲಾವಿದ ಮಾಸ್ಟರ್ ಶ್ರೇಯಸ್ (ಜೀನಿಯಸ್ ಮುತ್ತಾ) | ಅತ್ಯುತ್ತಮ ಬಾಲ ಕಲಾವಿದೆ – ಪುಣ್ಯಶ್ರೀ (ಇದು ನಮ್ಮ ಶಾಲೆ) | ಅತ್ಯುತ್ತಮ ನಟ – ವಿಜಯ್ ರಾಘವೇಂದ್ರ (ಜೀನಿಯಾಸ್ ಮುತ್ತಾ) | ಅತ್ಯುತ್ತಮ ನಟಿ – ವೀಣಾ ಸುಂದರ್ (ಸ್ವರಾಜ್ಯ)

ಅತ್ಯುತ್ತಮ ಪೋಷಕ ನಟ – ಸುಮನ್ (ಏಕಲವ್ಯ) | ಅತ್ಯುತ್ತಮ ಪೋಷಕ ನಟಿ – ಪದ್ಮ ವಾಸಂತಿ (ಜೀನಿಯಸ್ ಮುತ್ತಾ) | ಅತ್ಯುತ್ತಮ ನಿರ್ದೇಶಕ – ನಾಗಿಣಿ ಭರಣ (ಜೀನಿಯಸ್ ಮುತ್ತಾ) | ಅತ್ಯುತ್ತಮ ಸಂಕಲನ – ರವಿಚಂದ್ರನ್ (ಟೇಕ್ವಾಂಡೋ ಗರ್ಲ್) | ಅತ್ಯುತ್ತಮ ಗಾಯಕ – ಶಮಿತಾ ಮಲ್ನಾಡ್ (ಚಿಣ್ಣರ ಚಂದ್ರ) | ಅತ್ಯುತ್ತಮ ಛಾಯಾಗ್ರಹಣ – ವಿ. ಪವನ್ ಕುಮಾರ್ (ಕರಡಿ ಗುಡ್ಡ) | ಅತ್ಯುತ್ತಮ ಚಿತ್ರಕಥೆ – ಅಮ್ಮಿತ್ ರಾವ್ (ಕರಡಿ ಗುಡ್ಡ) | ಅತ್ಯುತ್ತಮ PRO – ಸುಧೀಂದ್ರ ವೆಂಕಟೇಶ್ | ಅತ್ಯುತ್ತಮ ಪ್ರೊಡಕ್ಷನ್ ಹೌಸ್ – ವೈ ಮೂವೀಸ್ (ಸ್ವರಾಜ್ಯ)
ಈ ಹಿಂದೆ ಚಲನಚಿತ್ರೋತ್ಸವ ಅಪ್ಪು ಹೆಸರಿನಲ್ಲಿ ನಡೆದಿತ್ತು. ಪುನೀತ್ ತಮ್ಮ ಸೇವೆಯಿಂದ ಎಲ್ಲರ ಮನಸ್ಸಿನಲ್ಲಿ ಭದ್ರ ಸ್ಥಾನ ಹೊಂದಿದ್ದಾರೆ. ಅವರ ಸತ್ಕಾರ್ಯಗಳು ಎಲ್ಲರಿಗೂ ಸ್ಪೂರ್ತಿ ಆಗಬೇಕು. ಅವರ ಹೆಸರಿನಿಂದ ಮಕ್ಕಳ ಚಲನಚಿತ್ರೋತ್ಸವ ಆರಂಭವಾಗಿರುವುದು ನಿಜಕ್ಕೂ ಸಂತಸ ತಂದಿದೆ.











