ಬೇಲೂರು: ಬಾಮ್ಸೆಫ್, ಡಿಎಸ್4 ಹಾಗೂ ಬಿಎಸ್ಪಿ ಸಂಸ್ಥಾಪಕರಾದ ಮಾನ್ಯವಾರ್ ಕಾನ್ಶಿರಾಂ ಜೀ ಯವರ ಪರಿನಿಬ್ಭಾಣ ದಿನದ ಅಂಗವಾಗಿ ಬಹುಜನ ಸಂಕಲ್ಪ ದಿನವನ್ನಾಗಿ ಇಡೀ ರಾಷ್ಟ್ರದಾದ್ಯಂತ ಆಚರಿಸಲಾಗುತ್ತಿದೆ ಎಂದು ಬಹುಜನ ಸಮಾಜ ಪಾರ್ಟಿ, ಕರ್ನಾಟಕ ರಾಜ್ಯ ಸಂಯೋಜಕ ಗಂಗಾಧರ್ ಬಹುಜನ್ ತಿಳಿಸಿದರು.
ಬೇಲೂರು ಪಟ್ಟಣದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾನ್ಯವಾರ್ ದಾದಾಸಾಹೇಬ್ ಕಾನ್ಶಿರಾಂ ಜೀ ಅವರು ಡಿಆರ್‌ಡಿಓ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸಲು ತನ್ನ ಹುದ್ದೆಗೆ ಸ್ವಯಂ ನಿವೃತ್ತಿ ಪಡೆದು ಯಾವುದೇ ಮನುವಾದಿ ಪಾರ್ಟಿಗಳ ಬಾಗಿಲು ಬಳಿ ಕುಳಿತು ಎಮ್ ಪಿ, ಎಮ್‌ಎಲ್‌ಎ, ಟಿಕೆಟ್ ಗೆ ಅಂಗಲಾಚದೆ, ಮತ್ತೆ ಮನುವಾದಿಗಳ ಗುಲಾಮಗಿರಿ ಮಾಡದೆ ಬಾಮ್ಸೆಫ್, ಡಿಎಸ್ 4, ಬಹುಜನ ಸಮಾಜ ಪಕ್ಷವನ್ನು ಕಟ್ಟಿ ಬೇಡುವ ಸಮಾಜವನ್ನು ಆಳುವ ಸಮಾಜವನ್ನಾಗಿ ಮಾಡಿದ ಕೀರ್ತಿ ಕಾನ್ಶಿರಾಂಜೀಯವರಿಗೆ ಸಲ್ಲುತ್ತದೆ ಇವರ ಕನಸನ್ನು ನನಸು ಮಾಡುವ ಸಲುವಾಗಿ ನಮ್ಮ ಪಕ್ಷ ಇವರ ಪರಿನಿಬ್ಭಾಣ ದಿನವನ್ನು ಬಹುಜನರ ಸಂಕಲ್ಪ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಕಾನ್ಶಿರಾಂ ಜೀ ಯವರು ಬಾಮ್ಸೆಫ್, ಡಿಎಸ್ 4, ಬಿಎಸ್ಪಿ ಮೂಲಕ ರಾಜಕೀಯ ಚಳುವಳಿ ಕಟ್ಟುತ್ತಿದ್ದಾಗ ಕಾನ್ಶಿರಾಂ ಜೀ ಯವರ ವಿರುದ್ಧವಾಗಿ ಮನುವಾದಿ ಪಕ್ಷಗಳ ಜೊತೆಗೂಡಿ ಪಿತೂರಿ ನೆಡೆಸುತ್ತಿದ್ದವರು ಈಗ ಕಾನ್ಶಿರಾಂ ಜೀ ಯವರ ಹೆಸರಿನಲ್ಲಿ ಪಕ್ಷ ಕಟ್ಟುವುದು, ಸಂಘಟನೆ ಕಟ್ಟುವುದು, ಕಾರ್ಯಕ್ರಮ ಮಾಡುವುದು ನಾಚಿಗೇಡಿತನ ಎಂದರು.
ಇಡೀ ದೇಶದಲ್ಲಿ ಅಕ್ಕಾ ಮಾಯಾವತಿಯವರು ಮಾತ್ರ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಾನ್ಯವಾರ್ ಕಾನ್ಶಿರಾಂಜೀ ಯವರ ದಾರಿಯಲ್ಲಿ ಸಾಮಾಜಿಕ ಮತ್ತು ರಾಜಕೀಯ ಚಳುವಳಿ ಕಟ್ಟುತ್ತಿದ್ದಾರೆ.
ಕರ್ನಾಟಕ ರಾಜ್ಯದಲ್ಲೂ ನಾಲ್ಕು ಕಡೆ ವಲಯ ಮಟ್ಟದ ಕಾರ್ಯಕ್ರಮವನ್ನು ಇದೇ ತಿಂಗಳ 9 ರಂದು ಬೆಂಗಳೂರು, ಮೈಸೂರು, ಗುಲ್ಬರ್ಗಾ ಮತ್ತು ಬೆಳಗಾಂ ವಲಯಗಳಲ್ಲಿ ನಡೆಯಲಿದೆ. ಮೈಸೂರು ವಲಯಮಟ್ಟದ ಕಾರ್ಯಕ್ರಮ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಂಟು ಜಿಲ್ಲೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಬೇಲೂರು ವಿಧಾನಸಭಾ ಕ್ಷೇತ್ರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿ ರಾಜು ಬೆಳ್ಳೊಟ್ಟೆ, ತಾಲೂಕು ಅದ್ಯಕ್ಷ ಪ್ರಕಾಶ್ ಕೆಸಗೋಡು ತಾಲ್ಲೂಕು ಸಂಯೋಜಕ ಉಮೇಶ್ ಬೊಮ್ಮನಹಳ್ಳಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸಾಣೇನಹಳ್ಳಿ,ಕಸಬಾ ಹೋಬಳಿ ಗೋವಿನಹಳ್ಳಿ ಹೊನ್ನಯ್ಯ ಉಪಸ್ಥಿತರಿದ್ದರು








